ಹೇಯ್ ಜ್ಯೋತಿಕ ಹೌ ಓಲ್ಡ್ ಆರ್ ಯು ?

ಗುರುವಾರ, 27 ನವೆಂಬರ್ 2014 (10:41 IST)
ಸೂರ್ಯ ಅವರ ಜೊತೆ ಮದುವೆ ಆಗಿ ಮಗುವಿನ ತಾಯಿಯಾಗಿ ಆರಾಮವಾಗಿ ಗೃಹಿಣಿಯ ಬದುಕು ನಡೆಸಿ ಈಗ ಮತ್ತೆ ಬಣ್ಣ ಹಚ್ಚಲು ಸಿದ್ಧ ಆಗಿದ್ದಾರೆ ಜ್ಯೋತಿಕ. ಕನ್ನಡ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಜ್ಯೋತಿಕ ಬಾಲಿವುಡ್ ಹಾಗೂ ದಕ್ಷಿಣ ಭಾರತ ಎಲ್ಲಾ ವುಡ್ ಗಳಲ್ಲಿ ನಟಿಸಿರುವ ನಗ್ಮಾ ಅವರ ಸಹೋದರಿ ಎನ್ನುವುದು ನಿಮಗೆ ಗೊತ್ತೇ ಇದೆ. ದಕ್ಷಿಣ ಭಾರತದ, ಅದರಲ್ಲೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿದ್ದ ಜ್ಯೋತಿಕ ಆನಂತರ ತಮಿಳು ತೆಲುಗು ಸ್ಟಾರ್ ನಟ ಸೂರ್ಯ ಅವರ ಜೊತೆ ಮದುವೆ ಆದರು.

ಬಣ್ಣದ ಲೋಕಕ್ಕೆ ಎಂಟ್ರಿ ಆದರೆ ಸಾಕು ಅದರ ಸೆಳೆತ ಇದ್ದೆ ಇರುತ್ತದೆ. ಹಾಗೆ ಆಗಿದೆ ಜ್ಯೋತಿಕ ವಿಷಯದಲ್ಲೂ ಸಹಿತ. ಆಕೆ ಈಗ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡಿಸಿದ್ದಾರೆ. ಇದೋ ಬಂದ್ರು ಅದೋ ಬಂದ್ರು ಎಂದು ಕಳೆದ ಒಂದು ವರ್ಷದಿಂದ ಆಕೆಯ ಬರುವಿಕೆಯ ಬಗ್ಗೆ ಸುದ್ದಿ ಹರಡಿತ್ತು. ಆದರೆ ಅದು ಸ್ಪಷ್ಟವಾದ  ನಿಚ್ಚಳ ಸುದ್ದಿ ಆಗಿರಲಿಲ್ಲ. ಗಾಳಿ ಸುದ್ದಿ. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಜ್ಯೋತಿಕ ನಟಿಸಲು ಸಿದ್ಧತೆ ನಡೆಸಿದ್ದಾರೆ. ಅದು ತಮಿಳು ಚಿತ್ರದಲ್ಲಿ.
 
ಈ ಚಿತ್ರಕ್ಕೆ ಇನ್ನು ಹೆಸರು ಇಟ್ಟಿಲ್ಲವಂತೆ. ಇದು ಮಲೆಯಾಳಂ ಚಿತ್ರ ಹೌ  ಓಲ್ಡ್ ಆರ್ ಯು ರೀಮೇಕ್ ಚಿತ್ರ. ರೆಹಮಾನ್ ಈ ಚಿತ್ರದಲ್ಲಿ ಜ್ಯೋತಿಕ ಗಂಡನ ಪಾತ್ರಧಾರಿ ಆಗಿದ್ದಾರೆ. ಈ ಚಿತ್ರವನ್ನು ರೋಶನ್ ಆಂಡ್ರೂ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಸಕತ್ ಇಷ್ಟವಾದ ಕಾರಣ ಜ್ಯೋತಿಕ ಹಿಂದೆ-ಮುಂದೆ ನೋಡದೆ ನಟಿಸಲು ಒಪ್ಪಿಗೆ ನೀಡಿದ್ದಾರಂತೆ. ಅಂದಂಗೆ ಈ ಚಿತ್ರ ಅವರ ಹೋಂ ಬ್ಯಾನರ್ ನಲ್ಲಿ ಸಿದ್ಧ ಆಗ್ತಾ ಇದೆ. 

ವೆಬ್ದುನಿಯಾವನ್ನು ಓದಿ