ತಮಿಳು ಸೂಪರ್ ಸ್ಟಾರ್ ವಿಜಯ್‌ರೊಂದಿಗೆ ಸನ್ನಿ ಲಿಯೋನ್ ಐಟಂ ಡ್ಯಾನ್ಸ್?

ಶನಿವಾರ, 22 ಅಕ್ಟೋಬರ್ 2016 (14:25 IST)
ತಮಿಳು ಸಿನೆಮಾ ಸೂಪರ್ ಸ್ಟಾರ್ ವಿಜಯ್ ನಟನೆಯ ಭೈರವಾ ಚಿತ್ರದಲ್ಲಿ ಹಾಟ್ ನಟಿ ಸನ್ನಿ ಲಿಯೋನ್ ನಟಿಸುತ್ತಿದ್ದಾರೆ ಎನ್ನುವ ವರದಿಗಳನ್ನು ಚಿತ್ರ ನಿರ್ಮಾಪಕರು ತಳ್ಳಿಹಾಕಿದ್ದಾರೆ.

ಇಳಯಾದಳಪತಿ ವಿಜಯ್ ಭೈರವ್ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದು ದೀಪಾವಳಿ ಹಬ್ಬದಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಯ ದಿನಾಂಕ ನಿಗದಿಪಡಿಸಿಲ್ಲ. ವಿಜಯ್ ಅಭಿಮಾನಿಗಳಿಗೆ ಸರ್‌ಪ್ರೈಸ್ ಕಾದಿದೆ ಎಂದು ತಿಳಿಸಿದ್ದಾರೆ. 

ಕತ್ತಿ ಚಿತ್ರ ಬಿಡುಗಡೆಯಾದ ಎರಡು ವರ್ಷಗಳ ನಂತರ ವಿಜಯ್ ಮತ್ತು ನಿರ್ದೇಶಕ ಎ.ಆರ್.ಮುರುಗದಾಸ್ ಜೋಡಿ ಮತ್ತೆ ಚಿತ್ರರಂಗದಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದೆ. 
 
ಇದಕ್ಕಿಂತ ಮೊದಲು , ಭೈರವಾ ಚಿತ್ರದ ವಿಶೇಷ ಹಾಡಿನಲ್ಲಿ ಸನ್ನಿ ಲಿಯೋನ್ ನೃತ್ಯ ಮಾಡಲಿದ್ದಾರೆ ಎನ್ನುವ ವರದಿಗಳು ಹರಡಿದ್ದವು. ಆದರೆ, ಇವೆಲ್ಲಾ ಉಹಾಪೋಹದ ವರದಿಗಳು ಎಂದು ಚಿತ್ರ ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ