ಎರಡನೇಯ ಮಗುವಿಗೆ ಅಪ್ಪನಾಗುತ್ತಿರುವ ಅಲ್ಲು ಅರ್ಜುನ್

ಗುರುವಾರ, 21 ಜುಲೈ 2016 (17:41 IST)
ತೆಲಗು ನಟ ಅಲ್ಲು ಅರ್ಜುನ್ ತಮ್ಮ ಎರಡನೇಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕುಟುಂಬದ ನೂತನ ಸದ್ಯಸರ ಬಗ್ಗೆ ಹಂಚಿಕೊಳ್ಳುವುದು ಇಷ್ಟವಾಗುತ್ತದೆ ಎಂದು ಅಲ್ಲು ಅರ್ಜುನ್ ತಿಳಿಸಿದ್ದಾರೆ. 5 ವರ್ಷದ ಹಿಂದೆ ಸ್ನೇಹಾ ರೆಡ್ಡಿಯನ್ನು ಮದುವೆಯಾಗಿದ್ದ ಅಲ್ಲು ಅರ್ಜುನ್‌ಗೆ ಆಯಾನ್ ಎಂಬ ಪುತ್ರನಿದ್ದಾನೆ.

 
ನನ್ನ ಫ್ಯಾಮಿಲಿ ನೂತನ ಸದಸ್ಯನ ಬೆಳವಣಿಗೆ ಕುರಿತು ಶೇರ್ ಮಾಡುವುದು ಖುಷಿ ಕೊಡುತ್ತದೆ. ಶೀರ್ಘದಲ್ಲೇ ಮತ್ತೊಂದು ಮಗು ಬರಲಿದೆ ಎಂದು ಅಲ್ಲು ಅರ್ಜುನ್ ಟ್ವಿಟರ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

ಕುಟುಂಬ ಮೂಲಗಳ ಪ್ರಕಾರ ನವೆಂಬರ್‌ನಲ್ಲಿ ಮಗು ಆಗಮನವಾಗಲಿದೆ ಎಂದು ಹೇಳಲಾಗುತ್ತಿದೆ. 
 
ಗರ್ಭಿಣಿಯಾಗರುವ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಇಚೆಗಷ್ಟೇ ಅರ್ಜುನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ತೆಲಗು ಬ್ಲಾಕ್ ಬಾಸ್ಟರ್ ಚಿತ್ರ ಸೈರೆನೋಡು ಚಿತ್ರವು ಇವರ ಕಡೆಯ ಮೂವೀಗಳಲ್ಲಿ ನಟಿಸಿದ್ದರು. ಹರೀಶ್ ಶಂಕರ್ ನಿರ್ದೇಶನದಲ್ಲಿ ಮುಂದಿನ ಚಿತ್ರದಲ್ಲಿ ಇನ್ನೂ ಹೆಸರಿಡದ ಚಿತ್ರದಲ್ಲಿ ಅಲ್ಲು ಕಾಣಿಸಿಕೊಳ್ಳುತ್ತಿದ್ದಾರೆ. 

ತನ್ನದೇ ಆದ ಸ್ಟೈಲ್ ಮೂಲಕ ಕ್ರೇಜ್ ಮೂಡಿಸಿರುವ ಅಲ್ಲು ಅರ್ಜುನ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ತುಂಬಾ ಫೇಮಸ್ ನಟ.. ಆದರೆ ತೆಲಗು ಅಭಿಮಾನಿಗಳು ಮಾತ್ರ ಅಲ್ಲು ಅವರನ್ನು ಲೈಕ್ ಮಾಡ್ತಿಲ್ಲ.. ಇವರನ್ನು ಪ್ರೀತಿ ಮಾಡೋ ಅಭಿಮಾನಿಗಳು ಎಲ್ಲಾ ಕಡೆಗಳಲ್ಲೂ ಇದ್ದಾರೆ ಎಂಬುದು ಇದೀಗ ಸಾಬೀತುಪಡಿಸಿದ್ದರು ಅಲ್ಲು ಅರ್ಜುನ್. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ


 

ವೆಬ್ದುನಿಯಾವನ್ನು ಓದಿ