ಹರ್ಯಾಣದ ಅತ್ಯಾಚಾರ ಸಂತ್ರಸ್ತ ಯುವತಿಯಿಂದ ಸಲ್ಮಾನ್‌ಗೆ ನೋಟಿಸ್

ಸೋಮವಾರ, 27 ಜೂನ್ 2016 (12:08 IST)
'ಮಹಿಳೆಯರ ಅತ್ಯಾಚಾರ'ಕ್ಕೆ ಹೇಳಿಕೆಗೆ ಸಂಬಂಧಪಟ್ಟಂತೆ ಸಲ್ಮಾನ್ ಖಾನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಲ್ಮಾನ್ ಖಾನ್ 'ರೇಪ್ 'ಹೇಳಿಕೆ ವಿರುದ್ಧ ಅತ್ಯಾಚಾರಕ್ಕೆ ಒಳಗಾದ ಹರ್ಯಾಣದ ಪೀಡಿತ ಯುವತಿಯೊಬ್ಬಳು ಭಾವನೆಗಳಿಗೆ ನೋವುವನ್ನುಂಟು ಮಾಡಿದ ಆಧಾರದ ಮೇಲೆ ಸಲ್ಮಾನ್‌ಗೆ ನೊಟೀಸ್ ಕಳುಹಿಸಿದ್ದಾಳೆ. ಸಲ್ಮಾನ್ ಖಾನ್‌ಗೆ 10 ಕೋಟಿ ನೀಡುವಂತೆ ಹಾಗೂ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಬೇಡಿಕೆ ಇಟ್ಟಿದ್ದಾಳೆ. 


ಈ ಸಂಬಂಧ ಸಲ್ಮಾನ್ ಖಾನ್ ಮುಂಬೈನ ಬಾಂದ್ರಾದ ನಿವಾಸಕ್ಕೆ ನೋಟಿಸ್ ಕಳುಹಿಸಲಾಗಿದೆ. ಸುಲ್ತಾನ್ ಚಿತ್ರದ ವೇಳೆ ಕೇಳಲಾದ ಪ್ರಶ್ನೆಗೆ 'ರೇಪ್ ಆದ ಮಹಿಳೆಯ ನನ್ನ ಸ್ಥಿತಿಯಾಗಿತ್ತು' ಎಂದು ಸಲ್ಲು ಹೇಳಿಕೆ ನೀಡಿರುವುದರ ಬಗ್ಗೆ ಟಿವಿ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ವೈರಲ್ ಆಗಿತ್ತು. 
 
ಅದಾದ ಬಳಿಕ ಎಲ್ಲೆಡೆ ಸಲ್ಮಾನ್ ಹೇಳಿಕೆಗೆ ವಿರೋಧಗಳು ವ್ಯಕ್ತವಾಗಿದ್ದವು. ನಂತರ ಸಲ್ಲು ಮಾಧ್ಯಮ ಎದುರು ಕ್ಷಮೆ ಕೂಡ ಕೇಳಿದ್ದರು.

ಆದ್ರೆ ಈ ಪ್ರಕರಣ ಇಲ್ಲಿಗೆ ಮುಗಿಯಲಿಲ್ಲ. ಇದೀಗ ಹರ್ಯಾಣದ ಅತ್ಯಾಚಾರ ಪೀಡಿತೆ ಯುವತಿಯೊಬ್ಬಳಾದ ರೇಶ್ಮಾ (ಹೆಸರು ಬದಲಾವಣೆ ಮಾಡಲಾಗಿದೆ) ಎನ್ನುವ ಯುವತಿ ನಾಲ್ಕು ವರ್ಷದ ಹಿಂದೆ 10 ಜನ ಆಕೆಯನ್ನು ಕಿಡ್ನಾಪ್ ಮಾಡಿ ಗ್ಯಾಂಗ್ ರೇಪ್ ಮಾಡಲಾಗಿತ್ತು. ಈ ಘಟನೆಯಿಂದ ಮನನೊಂದ ರೇಶ್ಮಾ ತಂದೆ ಆತ್ಮಹತ್ಯಾ ಮಾಡಿಕೊಂಡಿದ್ದರು. 10 ಆರೋಪಿಗಳಲ್ಲಿ ನಾಲ್ಕು ಜನ ಆರೋಪಿಗಳಿಗೆ ಪಂಜಾಬ್ ಹಾಗೂ ಹರಿಯಾಣ ಕೋರ್ಟ್ ಶಿಕ್ಷೆ ವಿಧಿಸಿತ್ತು.  
 
ಸಲ್ಮಾನ್‌ಗೆ ಕಳುಹಿಸಲಾದ ನೊಟೀಸ್‌ನಲ್ಲಿ ವಕೀಲ ಈ ರೀತಿ ಬರೆದಿದ್ದಾರೆ. ನನ್ನ ಕಕ್ಷಿದಾರರು ರೇಪ್‍ಗೆ ಒಳಪಟ್ಟಿದ್ದಾರೆ... ನಿಮ್ಮ ಹೇಳಿಕೆಯಿಂದ ನನ್ನ ಕ್ಲೈಟ್‌ ಮಾನಸಿಕವಾಗಿ ನೊಂದಿದ್ದಾರೆ. 21ರಂದು ನೀಡಿದ್ದ ಹೇಳಿಕೆಗೆ ಅವರು ಮಾನಸಿಕವಾಗಿ ಕುಂದಿದ್ದಾರೆ. ಆದ್ದರಿಂದ ಅವರು ಮನೋತಜ್ಞರ ಹತ್ತಿರ ಮಾನಸಿಕ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 
 
ಇನ್ನೂ 21 ಜೂನ್‌ರಂದು ಸಲ್ಮಾನ್ ನೀಡಿದ್ದ ಹೇಳಿಕೆ ತಪ್ಪು. ಅದು ಸಂವಿಧಾನದ ಭಾವನೆಗಳಿಗೆ ವಿರುದ್ಧವಾದದ್ದು ಎಂದು ತಿಳಿಸಿದ್ದಾರೆ. 
 
ಇನ್ನೂ ಇದೇ ವೇಳೆ ಅತ್ಯಾಚಾರ ಪೀಡಿತೆ ಯುವತಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ದೊಡ್ಡ ಸೆಲೆಬ್ರಿಟಿಯಾಗಿರುವ ಅವರು ಏನನ್ನಾದರೂ ಮಾತನಾಡಬಲ್ಲರೇ.. ಅವರಿಗೇನು ಗೊತ್ತು ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಸ್ಥಿತಿ ಹಾಗೂ ನೋವು ಏನೆಂದು..? ನಾನು ಎಲ್ಲವನ್ನು ಕಳೆದುಕೊಂಡಿದ್ದೇನೆ. ಅಲ್ಲದೇ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಈ ಶಾಕ್‌ನಿಂದ ಇದುವರೆಗೂ ನಾನು ಹೊರಬಂದಿಲ್ಲ. ರೇಪ್ ಮಹಿಳೆಯರ ಬಗ್ಗೆ ಅಪಹಾಸ್ಯ ಮಾಡಲು ಅದ್ಹೇಗೆ ಸಾಧ್ಯ? ಎಂದು ಹರ್ಯಾಣದ ಅತ್ಯಾಚಾರ ಪೀಡಿತ ಯುವತಿ ಪ್ರಶ್ನೆ ಮಾಡಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ