ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸಿನಿಮಾ ತಂಡ ಮೈಸೂರಿನಲ್ಲಿ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿತ್ತ್ತು. ಈ ವೇಳೆ ಸುದೀಪ್ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡು ಅವರು ಕೆಲ ದಿನ ರೆಸ್ಟ್ ನಲ್ಲಿದ್ದರು. ಹಾಗಾಗಿ ಶೂಟಿಂಗ್ ನಿಂತು ಹೋಗಿತ್ತು. ಇದೀಗ ಶೂಟಿಂಗ್ ಮತ್ತೆ ಆರಂಭ ಮಾಡಿದ್ರು ಸಿನಿಮಾ ತಂಡಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ.