ಹೇಮಾ ಮಾಲಿನಿಗೆ ಕೊರೋನಾ: ವದಂತಿಗಳಿಗೆ ಸ್ಪಷ್ಟನೆ ನೀಡಿದ ನಟಿ

ಸೋಮವಾರ, 13 ಜುಲೈ 2020 (11:02 IST)
ಮುಂಬೈ: ಅಮಿತಾಭ್ ಬಚ್ಚನ್ ಕುಟುಂಬ ಕೊರೋನಾ ಸೋಂಕಿತರಾದ ಸುದ್ದಿಯ ಬೆನ್ನಲ್ಲೇ ನಟಿ, ಸಂಸದೆ ಹೇಮಾ ಮಾಲಿನಿಗೂ ಕೊರೋನಾ ತಗುಲಿದೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸ್ವತಃ ಹೇಮಾ ಮಾಲಿನಿಯೇ ಸ್ಪಷ್ಟನೆ ನೀಡಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಹೇಮಾ ಮಾಲಿನಿಗೆ ಕೊರೋನಾ ಸೋಂಕು ತಗುಲಿದೆ, ಅವರು ಕ್ವಾರಂಟೈನ್ ಗೊಳಗಾಗಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು.

ಈ ಹಿನ್ನಲೆಯಲ್ಲಿ ವಿಡಿಯೋ ಸಂದೇಶ ಮೂಲಕ ಸ್ಪಷ್ಟನೆ ನೀಡಿದ ಹೇಮಾ ಮಾಲಿನಿ, ನಾನು ಆರೋಗ್ಯವಾಗಿದ್ದೇನೆ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ