ಬಾಲಿವುಡ್ ನಲ್ಲಿ ಮತ್ತಷ್ಟು ಕೊರೋನಾ ರುದ್ರನರ್ತನ

ಸೋಮವಾರ, 13 ಜುಲೈ 2020 (09:34 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಕುಟುಂಬವಿಡೀ ಕೊರೋನಾ ಸೋಂಕಿತರಾದ ಸುದ್ದಿಯ ಬೆನ್ನಲ್ಲೇ ಮತ್ತಷ್ಟು ಸೆಲೆಬ್ರಿಟಿಗಳು, ಕುಟುಂಬಸ್ಥರು ಮಹಾಮಾರಿ ಸೋಂಕಿಗೆ ತುತ್ತಾದ ವರದಿಯಾಗಿದೆ.


ಹಿರಿಯ ನಟ ಅನುಪಮ್ ಖೇರ್ ತಾಯಿಗೂ ಕೊರೋನಾ ಇರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ನಟಿ ರೇಖಾ ಮನೆಯ ಸಿಬ್ಬಂದಿಯಲ್ಲೂ ಕೊರೋನಾ ಕಾಣಿಸಿಕೊಂಡಿದೆ. ಹಿರಿತೆರೆ ಅಲ್ಲದೆ, ಹಿಂದಿ ಟಿವಿ ತಾರೆಯರಿಗೂ ಕೊರೋನಾ ವಕ್ಕರಿಸಿದೆ. ಟಿವಿ ತಾರೆ ಪಾರ್ಥ್ ಸಮರ್ಥಾನ್ ಕೊರೋನಾ ಇರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಂತೂ ಈಗ ಬಾಲಿವುಡ್ ಮಂದಿಯೂ ಕೊರೋನಾ ಭಯದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ