ಅನುಷ್ಕಾ ವಿರಾಟ್ ಮತ್ತೆ ಒಂದಾಗೋಕೆ ಕಾರಣ ಸಲ್ಮಾನ್ ಖಾನ್ ಅವರೇನಾ?

ಶುಕ್ರವಾರ, 1 ಜುಲೈ 2016 (08:54 IST)
ನಾನೇ ಲೈನಾ ನೀನೇ ಮಜ್ನು ಅಂತಾ ಹಾರಾಡುತ್ತಿದ್ದ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವೆ ಅದೇನಾಯ್ತೋ ಗೊತ್ತಿಲ್ಲ. ಇಬ್ಬರು ಇನ್ಮೇಲೆ ಒಂದಾಗೋಕೆ ಸಾಧ್ಯಾನೇ ಇಲ್ಲ ಅನ್ನೋ ಹಾಗೇ ದೂರವಾಗಿ ಬಿಟ್ಟರು.ಆದ್ರೆ ಇಬ್ಬರ ನಡುವೆ ಪ್ರೀತಿ ಇನ್ನೂ ಇದೇ ಅನ್ನೋದು ಮಾತ್ರ ಅನೇಕ ಬಾರಿ ಸಾಬೀತಾಗಿತ್ತು. ಕೊನೆಗೂ ಅವರಿಬ್ಬರು ಈಗ ಮತ್ತೆ ಒಂದಾಗಿದ್ದಾರೆ.ಆದ್ರೆ ಇವರಿಬ್ಬರು ಒಂದಾಗೋಕೆ ಕಾರಣ ಸಲ್ಮಾನ್ ಖಾನ್ ಅವರು ಅಂತಾ ಹೇಳಲಾಗುತ್ತಿದೆ.

ಹೌದು...  ವಿರಾಟ್ ಕೊಹ್ಲಿ ಅವರಿಂದ ದೂರವಾದ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಅವರು ಸಲ್ಮಾನ್ ಖಾನ್ ಅವರೊಂದಿಗೆ ಸುಲ್ತಾನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು.ಇದೇ ವೇಳೆ ಬುಡಾಪೆಸ್ಟ್ ನಲ್ಲಿ ಸುಲ್ತಾನ್ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು.ಆಗ ಸಲ್ಮಾನ್ ಖಾನ್ ಅವರು ಅನೇಕ ಬಾರಿ ಅನುಷ್ಕಾ ಶರ್ಮಾ ಅವರ ಮನವೊಲಿಸೋದಕ್ಕೆ ಯತ್ನಿಸಿದ್ರಂತೆ.ಅಲ್ಲದೇ ಪ್ರೀತಿಸಿದ ಬಳಿಕ ಅದು ನಿಜವಾದೆ ಪ್ರೀತಿಯಾಗಿದ್ರೆ ಖಂಡಿತವಾಗಿಯೂ ದೂರವಾಗೋದು ಕಷ್ಟ ಅಂತಾ ಅನುಷ್ಕಾಗೆ ಹೇಳಿದ್ರಂತೆ.ಅಲ್ಲದೇ ಆಗಾಗ್ಗೆ ಹಾಸ್ಯಮಯವಾಗಿ ಪ್ಯಾರ್ ಬಾರ್ ಬಾರ್ ಹೋತಾ ಹೈ ಅಂತಾ ನಿಮ್ಮದು ನಿಜವಾಗಿಯೂ ಸತ್ಯವಾದ ಪ್ರೀತಿ ಮತ್ತೆ ಒಂದಾಗಿ ಅಂತಾ ಸಲಹೆ ನೀಡಿದ್ರಂತೆ. ಸಲ್ಮಾನ್ ಖಾನ್ ಅವರ ಮಾತು ಕೇಳಿದ ಬಳಿಕ ಅನುಷ್ಕಾ ಮತ್ತೆ ವಿರಾಟ್ ಬಳಿಗ ಹೋದ್ರಂತೆ.
 
ಇನ್ನು ವಿರಾಟ್ ಅವರನ್ನು ಮತ್ತೆ ಸ್ವೀಕರಿಸುವ ಮೊದಲು ಅನುಷ್ಕಾ ಶರ್ಮಾ ವಿರಾಟ್ ಅವರಿಗೆ ಕೆಲವೊಂದು ಷರತ್ತುಗಳನ್ನು ನೀಡಿದ್ರಂತೆ.ಅದೇನಪ್ಪಾ ಅಂದ್ರೆ ನೀವು ನನ್ನನ್ನು ಪ್ರೀತಿಸಿದ್ರೆ ಖಂಡಿತವಾಗಿಯೂ ನನ್ನನ್ನೇ ವಿವಾಹವಾಗಬೇಕು ಹಾಗಾದ್ರೆ ಮಾತ್ರ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಅಂತಾ ಹೇಳಿದ್ದರಂತೆ. ಕೊಹ್ಲಿ ಒಪ್ಪಿಗೆ ನೀಡಿದ್ದರಿಂದ ಪ್ರೇಮಿಗಳು ಮತ್ತೆ ಒಂದಾದ್ರಂತೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ