ಹಿಂದಿ ಗೀತೆ ರಚನೆಗಾರ, ಖ್ಯಾತ ಕವಿ ಗೋಪಾಲ್‌ದಾಸ್ ನೀರಜ್ ಇನ್ನಿಲ್ಲ

ಶುಕ್ರವಾರ, 20 ಜುಲೈ 2018 (15:39 IST)
ನವದೆಹಲಿ : ಹಿಂದಿ ಗೀತೆ ರಚನೆಗಾರ, ಖ್ಯಾತ ಕವಿ ಗೋಪಾಲ್‌ದಾಸ್ ನೀರಜ್ ಅವರು ಗುರುವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.


ಇವರಿಗೆ 93 ವರ್ಷ ವಯಸ್ಸಾಗಿದ್ದು, ಕಳೆದ ಕೆಲವು ವರ್ಷಗಳಿಂದ ವಯೋಸಹಜ ಹಾಗೂ ಉಸಿರಾಟದ ತೊಂದರೆಯಿಂದ ಗೋಪಾಲ್ ದಾಸ್ ಬಳಲುತ್ತಿದ್ದರು. ಬುಧವಾರ ಸಂಜೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಗ್ರಾದಿಂದ ಎಐಐಎಂಎಸ್ ನ ಪಲ್ಮನರಿ ಇಲಾಖೆಗೆ ಅವರನ್ನು ಕರೆತರಲಾಗಿತ್ತು ಎಂದು ಕುಟುಂಬ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.


ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮಂದಿ ಗಣ್ಯರು ನೀರಜ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇವರು ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು. ಇವರು ಬಾಲಿವುಡ್ ಚಿತ್ರಗಳ ಜನಪ್ರಿಯ ಗೀತೆಗಳ ಮೂಲಕ 1960 ಮತ್ತು 70ರ ದಶಕದಲ್ಲಿ ಚಿತ್ರರಸಿಕರಲ್ಲಿ ಹುಚ್ಚು ಹಿಡಿಸಿದ್ದರು. ಫೂಲನ್ ಕೆ ರಂಗ್ ಸೇ (ಪ್ರೇಮ್‌ಪುಜಾರಿ), ಎ ಭಾಯ್ ಝರಾ ದೇಖ್ ಖೆ (ಮೇರಾ ನಾಮ್ ಜೋಕರ್) ಹಾಗೂ ಮೇರೆ ಮನ್ ತೆರಾ ಪ್ಯಾಸಾ (ಗ್ಯಾಂಬ್ಲರ್) ಅವರ ಕೆಲ ಜನಪ್ರಿಯ ಹಾಡುಗಳು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ