ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೂ ಪ್ರವೇಶ ನೀಡಿದ ಸುಪ್ರೀಂ ಕೋರ್ಟ್‌

ಗುರುವಾರ, 19 ಜುಲೈ 2018 (08:51 IST)
ನವದೆಹಲಿ : ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೂ ಪ್ರವೇಶ ನೀಡಲು ಅವಕಾಶ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಇದೀಗ ಶಬರಿಮಲೆ ದೇಗುಲದಲ್ಲಿ ಪೂಜೆ ಮಾಡಲು ಪುರುಷರಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಮಹಿಳೆಯರಿಗೂ ಇದೆ ಎಂದು ಹೇಳಿದೆ.


ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳುಳ್ಳ ಸಾಂವಿಧಾನಿಕ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದ್ದು, ‘ಎಲ್ಲೆಲ್ಲಿ ಪುರುಷರು ಹೋಗಬಹುದೋ ಅಲ್ಲಿಗೆ ಮಹಿಳೆಯರೂ ತೆರಳಬಹುದು. ಪುರುಷರಿಗೆ ಅನ್ವಯಿ ಸುವ ಸಂಗತಿಗಳೆಲ್ಲವೂ ಮಹಿಳೆಯರಿಗೂ ಅನ್ವಯಿಸುತ್ತವೆ. ದೇಗುಲಕ್ಕೆ ಪ್ರವೇಶಿಸುವುದು ಶಾಸನವನ್ನು ಆಧರಿಸಿಲ್ಲ. ಇದು ಸಾಂವಿಧಾನಿಕ ಹಕ್ಕು. ಇದಕ್ಕೆ ಸಂಬಂಧಿಸಿದಂತೆ ಸಂವಿಧಾನದ 25 ಹಾಗೂ 26ನೇ ಕಲಂನಲ್ಲಿ ವಿವರಿಸಲಾಗಿದೆ’ ಎಂದು ತಿಳಿಸಿದೆ.


ಹಾಗೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಕಾಲಕಾಲಕ್ಕೆ ತನ್ನ ನಿಲುವನ್ನು ಬದಲಾಯಿಸುತ್ತಿರುವುದಕ್ಕೆ ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು, ನೀವು ಕಾಲ ಬದಲಾದಂತೆ ನಿಲುವನ್ನೂ ಬದಲಿಸುತ್ತಿದ್ದೀರಿ ಎಂದಿದೆ.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ನಟಿ ಜಯಮಾಲಾ ಅವರು, ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿಷೇಧ ಅಸಾಂವಿಧಾನಿಕ ಎಂಬ ಸುಪ್ರೀಂ ಕೋರ್ಟ್‌ ಅಭಿಪ್ರಾಯ ಸ್ವಾಗತಾರ್ಹ. ಮಹಿಳೆಗೆ ಸಮಾಜದಲ್ಲಿ ಅನ್ಯಾಯ ಆದಾಗಲೆಲ್ಲ ನ್ಯಾಯಾಲಯದಿಂದ ಆಕೆಗೆ ನ್ಯಾಯ ಸಿಕ್ಕಿದೆ’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ