ಹಿಂದೂ ಮುಸ್ಲಿಂ ಪ್ರೇಮ ಕಥೆಗೆ ಸಾಕ್ಷಿಯಾದ ಸಲ್ಮಾನ್ ಖಾನ್ ಹಾಗೂ ಕರೀನಾ ಕಪೂರ್

ಬುಧವಾರ, 12 ನವೆಂಬರ್ 2014 (10:54 IST)
ಹಿಂದೂ ಮುಸ್ಲಿಂ ಲವ್ ಸ್ಟೋರಿ ಇರುವ ಕಥೆಯ ಚಿತ್ರವೂ ಸಾಕಷ್ಟು ಪ್ರದರ್ಶನ ಆಗಿದೆ. ದಕ್ಷಿಣ ಭಾರತದಲ್ಲಿ ಇಂತಹ ಬೇರೆ ಧರ್ಮಗಳ ಪ್ರೀತಿಯ ಲೋಕ ತೆರೆದು ಹೆಚ್ಚು ಪ್ರಖ್ಯಾತಿ ಗಳಿಸಿದ್ದು ಮಣಿರತ್ನಂ ಅವರ ನಿರ್ದೇಶನದ ಬಾಂಬೆ. ಇದು ಭಾರತದ ಬಹುತೇಕ ಭಾಷೆಗಳಲ್ಲಿ ರೀಮೇಕ್ ಮಾಡಲಾಯ್ತು. ಏಕಕಾಲಕ್ಕೆ ಬಿಡುಗಡೆ ಆಯ್ತು. ಇದರಲ್ಲಿ ಮನಿಷ ಕೊಯಿರಾಲ ಮತ್ತು ಅರವಿಂದ್ ಸ್ವಾಮಿ ಮುಖ್ಯ ಪಾತ್ರಧಾರಿಗಳಾಗಿದ್ದರು. ಹಿಂದೂ ಹಾಗೂ ಮುಸ್ಲಿಂ ಧರ್ಮದವರು ಪ್ರೀತಿಸಿ ಮದುವೆಯಾದರೆ ಏನಾಗುತ್ತದೆ  ಎನ್ನುವ ಅಂಶವನ್ನು ಈ ದೃಶ್ಯಕಾವ್ಯ ಅದ್ಭುತವಾಗಿ ತಿಳಿಸಿತ್ತು. 

ಈಗ ಅದೇ ರೀತಿಯ ಕಥಾಹಂದರ ಇರುವ ಚಿತ್ರದ ಸಿದ್ಧತೆ ಮಾಡುತ್ತಿದ್ದಾರೆ ಕಬೀರ್ ಖಾನ್. ಆ ಚಿತ್ರದ ಹೆಸರು ಭಜರಂಗಿ ಭಾಯಿಜಾನ್. 
 
ಸಲ್ಮಾನ್ ಖಾನ್ ಹಾಗೂ ಕರೀನ ಕಪೂರ್ ಈ ಚಿತ್ರದಲ್ಲಿ ಒಂದಾಗಿದ್ದಾರೆ. ದೆಹಲಿಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಪ್ರಿಯತಮ ಮುಸ್ಲಿಂ ಮತ್ತು ಪ್ರೇಯಸಿ ಬ್ರಾಹ್ಮಣ ಜಾತಿಗೆ ಸೇರಿದವಳು. ಇವರ ನಡುವೆ ಪ್ರೇಮ ಉಂಟಾಗಿ, ಆ ಬಳಿಕ ಎದುರಾಗುವ ಕಷ್ಟಗಳ ಬಗ್ಗೆ ಈ ಚಿತ್ರದಲ್ಲಿ ತೋರಿಸುತ್ತಿದ್ದಾರೆ ಚಿತ್ರಮಂದಿ. ದೆಹಲಿ ಹಿನ್ನೆಲೆಯ ಕಥೆಯನ್ನು ಚಿತ್ರ ಹೊಂದಿದೆ. ಕಬೀರ್ ಖಾನ್  ಅವರು ಸಲ್ಮಾನ್  ಅವರ ಏಕ್ ಥಾ ಟೈಗರ್ ಚಿತ್ರ ನಿರ್ದೇಶಿಸಿದ್ದರು. ಅದು ನೂರು ಕೋಟಿ ಕ್ಲಬ್ ಗೆ ಸೇರಿತ್ತು. ಅಲ್ಲದೆ ಪಾಕಿಸ್ತಾನ್ ದೇಶದಲ್ಲಿ ಬಿಡುಗಡೆಗೆ ಅಡ್ಡಿಯಾಗುವಂತೆ ಸಿದ್ಧವಾಗಿತ್ತು. ಇವೆಲ್ಲ ಹಳೆಯ ಕಥೆ. ಆದರೆ ಸಲ್ಲು ಹಾಗೂ ಕಬೀರ್ ಮತ್ತೆ ಭಾಯ್ಜಾನ್ ಮೂಲಕ ಒಂದಾಗಿದ್ದಾರೆ ಅಷ್ಟೇ ಸದ್ಯದದ ಸುದ್ದಿ! 

ವೆಬ್ದುನಿಯಾವನ್ನು ಓದಿ