ಸಲ್ಮಾನ್ ಖಾನ್ ಗೆ ಶುಭಕೋರುವುದಕ್ಕೆ ಹೋಗಿ ಎಡವಟ್ಟು ಮಾಡಿಕೊಂಡ ಹಾಲಿವುಡ್ ನಟ

ಶುಕ್ರವಾರ, 23 ಮಾರ್ಚ್ 2018 (12:46 IST)
ಮುಂಬೈ : ಹಾಲಿವುಡ್ ನ ‘ಕ್ರೀಡ್ 2’ ಸಿನಿಮಾದ ನಟ ಸಿಲ್ವೆಸ್ಟರ್ ಸ್ಟಾಲೋನ್ ಅವರು  ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಅವರ ಅಭಿನಯದ ‘ರೇಸ್ 3’ ಚಿತ್ರಕ್ಕೆ ಶುಭ ಹಾರೈಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.


ಸಲ್ಮಾನ್ ಖಾನ್ ಅವರು ನಟ ಸಿಲ್ವೆಸ್ಟರ್ ಸ್ಟಾಲೋನ್ ನಟನೆಯ ‘ಕ್ರೀಡ್ 2’ ಚಿತ್ರಕ್ಕೆ ಶುಭಕೋರಿ ವಿಡಿಯೋ ಒಂದನ್ನು ಶೇರ್ ಮಾಡಿದ  ಹಿನ್ನಲೆಯಲ್ಲಿ ನಟ ಸಿಲ್ವೆಸ್ಟರ್ ಸ್ಟಾಲೋನ್ ಅವರು ಕೂಡ ಸಲ್ಮಾನ್ ಖಾನ್ ಅಭಿನಯದ ರೇಸ್3 ಚಿತ್ರಕ್ಕೆ ಶುಭ ಕೋರಿ ಚಿತ್ರದ ಪೋಸ್ಟರ್ ಒಂದನ್ನು ಶೇರ್ ಮಾಡಿದ್ದರು.


ಆದರೆ ‘ರೇಸ್ 3’ ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಬಾಬಿ ಡಿಯೋಲ್ ಇಬ್ಬರು ನಟಿಸಿದ್ದರಿಂದ, ಆ ಪೋಸ್ಟರ್ ನಲ್ಲಿದ್ದ ಫೋಟೋ ಸಲ್ಮಾನ್ ಖಾನ್ ಅವರದ್ದು ಆಗಿರದೆ ಬಾಬಿ ಡಿಯೋಲ್ ಅವರದಾಗಿತ್ತು. ಇದಕ್ಕೆ ಸಲ್ಮಾನ್ ಖಾನ್ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ  ನಟ ಸಿಲ್ವೆಸ್ಟರ್ ಸ್ಟಾಲೋನ್ ಅವರನ್ನು ಟ್ರೋಲ್ ಮಾಡಿದ್ದಾರೆ. ಇದನ್ನು ಗಮನಿಸಿದ ಸಲ್ಮಾನ್ ಖಾನ್ ಅವರು ಬಾಬಿ ಡಿಯೋಲ್ ರೇಸ್ 3 ಚಿತ್ರದ ಪ್ರಮುಖ ನಟ ಎಂಬುದಾಗಿ ತಿಳಿಸಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಬಾಬಿ ಡಿಯೋಲ್ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ