ಕನ್ನಡದ ಹಾಸ್ಯ ನಟ ಸಾಧುಕೋಕಿಲ್ ಅವರು ಹಾಸ್ಯ ಮಾಡಲು ಕಲಿತದ್ದು ಇವರಿಂದಲೇ ಅಂತೆ!

ಗುರುವಾರ, 22 ಮಾರ್ಚ್ 2018 (06:35 IST)
ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಜನರನ್ನು ನಗಿಸಿ ಮನೆಮಾತಾಗಿರುವ ನಟ ಸಾಧುಕೋಕಿಲ್ ಅವರು ಈ ರೀತಿಯಲ್ಲಿ  ಅಭಿನಯ ಮಾಡಲು ಕಲಿತದ್ದು ಬಾಲಿವುಡ್ ನ ಒಬ್ಬ ಖ್ಯಾತ ಕಾಮಿಡಿಯನ್ ನೋಡಿ ಎಂದು ಹೇಳಿದ್ದಾರೆ.


ಅವರು ಬೇರೆ ಯಾರು ಅಲ್ಲ. ಬಾಲಿವುಡ್ ಖ್ಯಾತ ಕಾಮಿಡಿಯನ್ ಜಾನಿ ಲಿವರ್ನ. ಈ ಹಿಂದೆ ಅನೇಕರು ಸಾಧುಕೋಕಿಲ ಅವರ ಅಭಿನಯ ನೋಡಿ ಅವರು ಹಿಂದಿಯ ಹಾಸ್ಯ ನಟ ಜಾನಿ ಲಿವರ್ನ ಅವರನ್ನು ಅನುಕರಣೆ ಮಾಡುತ್ತಿದ್ದಾರೆಂದು ಹೇಳಿದ್ದು, ಅದನ್ನು ಸಾಧು ಕೋಕಿಲ್ ಅವರು ಕೂಡ ಒಪ್ಪಿಕೊಂಡಿದ್ದರು. ಆದರೆ ಈಗ ಈ ವಿಷಯವನ್ನು ಅವರು ಜಾನಿ ಲಿವರ್ನ ಮುಂದೆಯೇ ಹೇಳಿದ್ದಾರೆ.


ನಿರ್ದೇಶಕ ಶಾಂತಾರಾಂ ಪುತ್ರ ಮುರಳಿ ಕೃಷ್ಣ ಅವರು ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಗರ’ ಚಿತ್ರದಲ್ಲಿ ಸಾಧು ಕೋಕಿಲ್ ಮತ್ತು ಜಾನಿ ಲೀವರ್‌ ಇಬ್ಬರು ಜೊತೆಯಾಗಿ ಸಹೋದರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜಾನಿ ಲೀವರ್‌ ಅವರು ಮೊದಲಬಾರಿಗೆ ಕನ್ನಡದಲ್ಲಿ ನಟಿಸಲಿರುವ ಚಿತ್ರ ಇದಾಗಿದೆ. ಈ ಚಿತ್ರದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸಾಧುಕೋಕಿಲ್ ಅವರು, ‘ನಾನು ಜಾನಿ ಲಿವರ್ನ ಮೊದಲ ಬಾರಿಗೆ ನೋಡಿದ್ದು ಮುಂಬೈನಲ್ಲಿ. ಡಾ.ರಾಜ್ ಅವರ ಜೊತೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿನ  ಷಣ್ಮುಗನಂದ ಹಾಲ್ನಲ್ಲಿ ಜಾನಿ ಲಿವರ್ ಕಾರ್ಯಕ್ರಮ ಕೊಡುತ್ತಿದ್ದರು. ಸತತವಾಗಿ ತಮ್ಮ ವಿಭಿನ್ನ ಹಾವಭಾವಗಳ ಮೂಲಕ ನಗಿಸುತ್ತಿದ್ದರು. ನಿಜ ಹೇಳಬೇಕೆಂದರೆ ಅವತ್ತೇ ನಾನು ಹುಚ್ಚನಾಗಿಬಿಟ್ಟೆ. ಅವತ್ತಿನಿಂದಲೇ ಜಾನಿಯಂತೆ ನಾನು ಆಡತೊಡಗಿದೆ. ನಿಜ ಹೇಳಬೇಕೆಂದರೆ ಕಾಮಿಡಿ ಟೈಮಿಂಗ್ನಲ್ಲಿ ಹೇಗೆ ರಿಯಾಕ್ಷನ್ಸ್ ಕೊಡಬೇಕೆಂಬುದನ್ನು ಇವರ ರಿಯಾಕ್ಷನ್ ನೋಡಿಯೇ ಕಲಿತಿದ್ದು ಇವರು ನನಗೆ ಗುರುಗಳಿದ್ದಂಗೆ’ ಎಂದು ಹೇಳಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ