ಮ್ಯಾಗಜೀನ್‌ ಮುಖಪುಟದಲ್ಲಿ ಪ್ರಿಯಾಂಕಾ ಛೋಪ್ರಾ ಹಾಟ್ ಪೋಸ್..

ಶುಕ್ರವಾರ, 17 ಜೂನ್ 2016 (18:11 IST)
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಹಾಲಿವುಡ್ ನಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇದೀಗ ಅವರು ಮ್ಯಾಗ್ಸಿಮ್ ಇಂಡಿಯಾ ಮ್ಯಾಗಜೀನ್‌ನಲ್ಲಿ ಕಪ್ಪು ಬಣ್ಣದ ಉಡುಪು ಧರಿಸಿ ಹಾಟ್ ಹಾಟ್ ಆಗಿ ಪಿಗ್ಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಅಲ್ಲದೇ ಪ್ರಿಯಾಂಕಾ ಛೋಪ್ರಾ ಜಗತ್ತಿನ ಹಾಟ್ ಮಹಿಳೆಯಾಗಿ ಹೊರಹೊಮ್ಮಿದ್ದಾರೆ ಎಂದು ಮ್ಯಾಗಜೀನ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. 

 
ಮ್ಯಾಗಜೀನ್ ಜೂನ್-ಜುಲೈ ಆವೃತ್ತಿಯಲ್ಲಿ ಪ್ರಿಯಾಂಕಾ ಛೋಪ್ರಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಲಿವುಡ್‌ನ ಕ್ವಾಂಟಿಕೋದಲ್ಲಿ ನಟಿಸಿರುವ ಪಿಗ್ಗಿ, ಬ್ಲ್ಯಾಕ್ ಬಣ್ಣದ ಉಡುಪಿನಲ್ಲಿ ಫೊಟೋಶೂಟ್‌ಗೆ ಪೋಸ್ ನೀಡಿರುವುದನ್ನು ಇಲ್ಲಿ ನೋಡಬಹುದು.

ಮೊನ್ನೆ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅನುರಾಗ್ ಕಶ್ಯಪ್ ಅವರ ಉಡ್ತಾ ಪಂಜಾಬ್ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಕ್ರಿಯೆಟಿವಿಟಿ ಎಂದಿಗೂ ನಿಲ್ಲವುದಿಲ್ಲ ಎಂದು ತಿಳಿಸಿದ್ದರು. 'ನಮ್ಮ ಪೂರ್ವಜರ ಸುದೀರ್ಘ ಹೋರಾಟದ ಬಳಿಕ ನಮಗೆ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಲಭಿಸಿದೆ'. 'ಕ್ರಿಯೆಟಿವಿಟಿಯನ್ನು ಪ್ರಜಾಪ್ರಭುತ್ವದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. 'ಜೈ ಗಂಗಾಜಲ' ಚಿತ್ರಕ್ಕೂ ಆಕ್ಷೇಪಣೆ ಕೇಳಿ ಬಂದಿದ್ದವು ಎಂದು ಪ್ರಿಯಾಂಕಾ ಹೇಳಿದ್ದರು. 
 
ಇತ್ತೀಚೆಗೆ ಪ್ರಿಯಾಂಕಾ ಛೋಪ್ರಾಗೆ ಪದ್ಮಶ್ರೀ ಪ್ರಶಸ್ತಿ ದೊರಕಿತ್ತು. 'ಉಡ್ತಾ ಪಂಜಾಬ್' ಟೈಟಲ್ ತೆಗೆದುಹಾಕುವ ಕುರಿತು ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕಾ. 'ಚಿತ್ರದ ಟೈಟಲ್ ಹಿಂದೆ ನಿರ್ಮಾಪಕರ ಹಾಗೂ ನಿರ್ದೇಶಕರ ಕ್ರಿಯೆಟಿವಿಟಿ ಅಡಗಿರುತ್ತದೆ 'ಹಾಗಾಗಿ ಅದನ್ನು ತೆಗೆದುಹಾಕಲು ಹೇಗೆ ಸಾಧ್ಯ? ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ