ಚಿತ್ರದಲ್ಲಿ ಮಾತ್ರವಲ್ಲ ನಿಜ ಬದುಕಲ್ಲೂ ಸಹ ನಾನು ಮತ್ತು ಆದಿತ್ಯ ಆಹಾರಪ್ರಿಯರು. ಹೊಸ ಬಗೆಯ ಆಹಾರ ಸೇವನೆ ಮಾಡಲು ಹೆಚ್ಚು ಇಷ್ಟ ಪಡ್ತೀವಿ. ನಾವು ಉತ್ತಮ ಫ್ರೆಂಡ್ಸ್ ಆಗಿದ್ದೇವೆ. ಈ ಚಿತ್ರದಲ್ಲಿ ನಾನು ಸೇಲ್ಸ್ ಗರ್ಲ್ ಆಗಿದ್ದೇನೆ, ಬಿರಿಯಾನಿ, ಕಬಾಬ್ ಮಾಡುವ ಅತ್ಯುತ್ತಮ ಶೆಫ್ ಪಾತ್ರದಲ್ಲಿ ಆದಿತ್ಯ ನಟಿಸುತ್ತಿದ್ದಾನೆ.
ದಾವತ್ ಎ ಇಶ್ಕ್ ಹಾಡುಗಳ ಬಿಡುಗಡೆಗೆಂದು ಆಕೆ ದೆಹಲಿಗೆ ಬಂದಿದ್ದಳು. ಕಳೆದವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಸಂಗತಿ ಹೇಳಿದ್ದಾಳೆ. ಹೈದರಾಬಾದ್ ಹುಡುಗಿ ಆಗಿರುವ ಪರಿಣಿತ ಇದರಲ್ಲಿ ಸೇಲ್ಸ್ ಗರ್ಲ್ ಪಾತ್ರದಲ್ಲಿ ನಟಿಸುತ್ತಾ ಇದ್ದಾಳೆ. ಹೈದರಾಬಾದ್, ಮುಂಬೈ ಮತ್ತು ಲಕ್ನೋ ನಗರದಲ್ಲಿ ಚಿತ್ರೀಕರಣ ಆಗುತ್ತಿದೆ. ತಾನು ಅತಿಯಾಗಿ ತಿಂದು ತನ್ನ ತೂಕ ಹೆಚ್ಚಿಸಿಕೊಂಡಿರುವುದಾಗಿ ಈ ಚೆಲುವೆ ಹೇಳಿದ್ದಾಳೆ.