ಅಕ್ಷಯ್ ಕುಮಾರ್ ಅವರನ್ನು ಹಾಡಿ ಹೊಗಳಿದ ಹೃತಿಕ್ ರೋಷನ್

ಮಂಗಳವಾರ, 5 ಜನವರಿ 2016 (10:29 IST)
ಅಕ್ಷಯ್ ಕುಮಾರ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಏರ್ ಲಿಫ್ಟ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾದ ಟ್ರೇಲರ್ ಗೆ ಅಭಿಮಾನಿಗಳು ಫಿದಾ ಆಗಿದ್ರೆ ಟ್ರೇಲರ್ ನೋಡಿದ ನಟ ಹೃತಿಕ್ ರೋಷನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಕ್ಷಯ್ ಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.
   
ಶನಿವಾರ ಬಿಡುಗಡೆಯಾಗಿರುವ ಏರ್ ಲಿಫ್ಟ್ ಸಿನಿಮಾ ಟ್ರೇಲರ್ ಈಗಾಗಲೇ ಅಭಿಮಾನಿಗಳಿಗೆ ಇಷ್ಟವಾಗಿದೆ. ಟ್ರೇಲರ್ ನಲ್ಲಿರುವ ಆಕ್ಷನ್ ಸೀನ್ ಗಳು ಈಗಗಾಲೇ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿವೆಯಂತೆ. ಇನ್ನು ಟ್ರೇಲರ್ ನಟ ಹೃತಿಕ್ ರೋಷನ್ ಅವರ ದಿಲ್ ಕೂಡ ಕದ್ದಿದೆ. ಅಕ್ಷಯ್ ಕುಮಾರ್ ಅವರ ಅಭಿನಯ ನೋಡಿದ ಹೃತಿಕ್ ಸಿನಿಮಾ ಖಂಡಿತವಾಗಿಯೂ ಬಾಕ್ಸಾಫೀಸ್ ನಲ್ಲಿ ಭರ್ಜರಿ ಯಶಸ್ಸು ಕಾಣುತ್ತೆ ಅಂದಿದ್ದಾರೆ.
 
 ಇನ್ನು ನಟ ಅನುಪಮ್ ಖೇರ್ ಕೂಡ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೇಟ್ ಮಾಡಿರುವ ಅನುಪಮ್ ಖೇರ್ ಅಕ್ಷಯ್ ಕುಮಾರ್ ನೀವು ಯಾವಾಗಲೂ ಉತ್ತಮವಾದ ಕೆಲಸವನ್ನೇ ಮಾಡುತ್ತೀರಿ.ಈ ಸಿನಿಮಾ ಹಿಟ್ ಆಗುತ್ತೆ ಅಂತಾ ನಾನು ಪ್ರಾಮಿಸ್ ಮಾಡುತ್ತೇನೆ ಅಂತಾ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ