ಡೈವೋರ್ಸ್ ಬಳಿಕ ಒಂದಾಗಿ ಕಾಣಿಸಿಕೊಂಡ ಸುಸೇನ್-ಹೃತಿಕ್

ಸೋಮವಾರ, 2 ಮೇ 2016 (15:05 IST)
ಬಾಲಿವುಡ್‍‌‌ ನಟ ಹೃತಿಕ್ ರೋಷನ್ ಕಂಗನಾ ರೌನತ್ ಮಧ್ಯೆ ಲಿಗಲ್ ವಾರ್ ನಡಿತಿರೋದು ನಿಮಗೆಲ್ಲಾ ಗೊತ್ತಿದೆ. ಆದ್ರೆ ವಿಷ್ಯ ಅಂದಲ್ಲ ಸುಸೇನ್ ಹಾಗೂ ಹೃತಿಕ್ ಮಧ್ಯೆ ಈಗಾಗ್ಲೇ ವಿಚ್ಛೇದನೆಯಾಗಿದೆ. ಆದರೆ ಮಗನ ಬರ್ತಡೇ ಪಾರ್ಟಿಯಲ್ಲಿ ಸುಸೇನ್ ಹಾಗೂ ಹೃತಿಕ್ ಒಟ್ಟಿಗೆ ಕಾಣಿಸಿಕೊಂಡ್ರು.. 
ಹೃತಿಕ್ ಪುತ್ರ ಶ್ರದ್ಧಾನ ಹುಟ್ಟುಹಬ್ಬದ ದಿನದಂದು ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಅದಲ್ಲದೇ ಸೋನಾಲಿ ಬೇಂದ್ರೆ ಕೂಡ ಸುಸೇನ್ ಜತೆಗಿದ್ದರು. 
ಬಹುದಿನದ ಬಳಿಕ ಹ್ಯಾಪಿ ಫ್ಯಾಮಿಲಿಯಾಗಿ ಗಮನ ಸೆಳೀತು...
ಮುಂದಿನ ಚಿತ್ರ 'ಕಬಿಲ್'ಚಿತ್ರದಲ್ಲಿ ಹೃತಿಕ್ ಕುರುಡು ವ್ಡಕ್ತಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಇನ್ನೂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅಯುಶ್ ಗೌರಿಕ್ಕರ್, ಅಲ್ಲದೇ ಈ ಚಿತ್ರದ ನಿರ್ಮಾಪಕ ಸಂಜಯ್ ಗುಪ್ತಾ. ಈ ಚಿತ್ರಕ್ಕಾಗಿ ಹೃತಿಕ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಹೃತಿಕ್ ಜತೆಗೆ ಜೋಡಿಯಾಗಲಿದ್ದಾರೆ ಯಾಮಿ ಗೌತಮಿ.
 
ಇನ್ನೂ ಹೃತಿಕ್ ಹಾಗೂ ಕಂಗನಾ ಮಧ್ಯೆ ವಾರ್ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಹೃತಿಕ್ ಮಾಜಿ ಪತ್ನಿ ಸುಸೇನ್ ಕೂಡ ಹೃತಿಕ್‌ರನ್ನು ಬೆಂಬಲಿಸಿದ್ದಾರೆ. 
 
ಅಲ್ಲದೇ ಇದರ ಮಧ್ಯೆ ಹೃತಿಕ್ ಮತ್ತೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂಧನ ಪಾತ್ರದಲ್ಲಿ ಮಿಂಚಲು ಉತ್ಸುಕರಾಗಿದ್ದಾರಂತೆ ಹೃತಿಕ್. ಚಿತ್ರ ಜನೆವರಿ 2017ಕ್ಕೆ ರಿಲೀಸ್ ಆಗಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 
 

ವೆಬ್ದುನಿಯಾವನ್ನು ಓದಿ