ರಣ್ ಬೀರ್ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಹೊಗಳಿದ ಹೃತಿಕ್ ರೋಷನ್

ಸೋಮವಾರ, 30 ನವೆಂಬರ್ 2015 (12:16 IST)
ರಣ್‌ಬೀರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ತಮಾಷಾ ಸಿನಿಮಾ ರಿಲೀಸ್ ಆಗಿ ಅಭಿಮಾನಿಗಳ ದಿಲ್ ಕದ್ದಿದೆ. ಈಗಾಗಲೇ ಸಿನಿಮಾ ನೋಡಿದ ಬಾಲಿವುಡ್ ಸ್ಟಾರ್ ಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾ ನೋಡಿದ ಹೃತಿಕ್ ರೋಷನ್ ಕೂಡ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.
 
ತಮಾಷಾ ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ಹೃತಿಕ್ ರಣ್ ಬೀರ್ ಹಾಗೂ ದೀಪಿಕಾ ಪಡುಕೋಣೆ ಅವರ ನಟನೆಯನ್ನು ಅಭಿನಂದಿಸಿದ್ದಾರೆ. ಒಳ್ಳೆಯ ಜನ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಾರೆ ಎಂದಿರುವ ಸಿನಿಮಾದಲ್ಲಿ ಅವರಿಬ್ಬರೂ ಉತ್ತಮವಾಗಿ ಅಭಿನಯಿಸಿದ್ದಾರೆ ಎಂದು ಪ್ರಶಂಸಿದ್ದಾರೆ. ಶುಕ್ರವಾರ ರಿಲೀಸ್ ಆದ ತಮಾಷಾ ಸಿನಿಮಾ ಮೊದಲ ದಿನವೇ 10.87 ಕೋಟಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ನಲ್ಲಿ ಗೆಲುವಿನ ಸೂಚನೆ ಕೊಟ್ಟಿದೆ.
 
ಇನ್ನು ಹೃತಿಕ್ ರೋಷನ್ 2014ರಲ್ಲಿ ರಿಲೀಸ್ ಆದ ಕಾಮಿಡಿ ಸಿನಿಮಾ ಬ್ಯಾಂಗ್ ಬ್ಯಾಂಗ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಸದ್ಯ ಹೃತಿಕ್ ರೋಷನ್ ಅವರು ಅಶುತೋಷ್ ಗೌರಿಕರ್ ನಿರ್ದೇಶನದ ಮೊಹೆಂಜೆದಾರೋ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

ವೆಬ್ದುನಿಯಾವನ್ನು ಓದಿ