ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ ಮೊದಲ ದಿನ ಮನೆಗೆ ಬಂದ ಹೆಣ್ಮಕ್ಕಳಿಗೆ ಹೆಣ್ಣುಮಕ್ಕಲು ಯಾವ ರೀತಿಇರಬೇಕು ಯಾವ ರೀತಿಯ ಬಟ್ಟೆ ಧರಿಸಬೇಕು ಅಂತಾ ಉಪದೇಶ ಮಾಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಹೆಣ್ಣು ಮಕ್ಕಳು ಅಂದ್ರೆ ತಾಯಿ ಸಮಾನ ಅಂತಾ ಪದೇ ಪದೇ ಹೇಳುವ ಹುಚ್ಚ ವೆಂಕಟ್ ಇದೀಗ ಫುಲ್ ಗರಂ ಆಗಿದ್ದಾರೆ.
ಅಂದ್ಹಾಗೆ ಹುಚ್ಚ ವೆಂಕಟ್ ಅವರು ಈ ಪಾಟಿ ಗರಂ ಆಗಿರೋದಕ್ಕೆ ಕಾರಣ ನೀರ್ ದೋಸೆ ಚಿತ್ರದ ಟ್ರೈಲರ್. ಈಗಾಗಲೇ ನೀರ್ ದೋಸೆ ಸಿನಿಮಾದ ಟ್ರೈಲರ್ ನೋಡಿದ ಮಂದಿಯೆಲ್ಲಾ ಅದರಲ್ಲಿರುವ ಡೈಲಾಗ್ ಗಳನ್ನು ಕೇಳಿ ಛೇ! ಅನ್ನುತ್ತಿದ್ದಾರೆ.
ಹೀಗಿರುವಾಗಲೇ ಹುಚ್ಚ ವೆಂಕಟ್ ಸಿನಿಮಾದ ಡೈಲಾಗ್ ಗಳ ವಿರುದ್ಧ ಗರಂ ಆಗಿದ್ದಾರೆ. ಹೆಣ್ಣುಮಕ್ಕಳನ್ನು ಅಶ್ಲೀಲವಾಗಿ ತೋರಿಸ್ತಿರೋ ಈ ಚಿತ್ರವನ್ನು ಬ್ಯಾನ್ ಮಾಡ್ಬೇಕ್ ಅನ್ನೋದು ಹುಚ್ಚ ವೆಂಕಟ್ ಅವರ ಡಿಮ್ಯಾಂಡ್.
ಇನ್ನು ನಮ್ಮ ಸಂಸ್ಕೃತಿ, ಸಂಪ್ರದಾಯಗಳಿಗೆ ಈ ಚಿತ್ರ ಕೆಟ್ಟ ಹೆಸರು ತರ್ತಿದೆ ಅನ್ನೋದು ವೆಂಕಟ್ ನೋವು. ಕನ್ನಡಕ್ಕೆ ಸಂಬಂಧಿಸಿದ ಬೇರೆ ವಿಚಾರಗಳ ಬಗ್ಗೆ ಹೋರಾಟ ಮಾಡೋ ಸಂಘಟನೆಗಳು 'ನೀರ್‌ದೋಸೆ' ಚಿತ್ರದ ಬಿಡುಗಡೆಯ ವಿರುದ್ಧವೂ ಹೋರಾಟ ಮಾಡ್ಬೇಕು ಅಂತಾ ವೆಂಕಟ್ ಅಸಮಾಧಾನ ಹೊರಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ