ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

Krishnaveni K

ಶನಿವಾರ, 28 ಜೂನ್ 2025 (21:46 IST)
ಬೆಂಗಳೂರು: ನಟ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಬಿಲ್ಲ ರಂಗ ಭಾಷಾ ಎಂದು ಎಲ್ಲರಿಗೂ ಗೊತ್ತು. ಈ ಸಿನಿಮಾಗಾಗಿ ಕಾಯುತ್ತಿದ್ದವರಿಗೆ ಈಗ ಗುಡ್ ನ್ಯೂಸ್ ಕಾದಿದೆ.

ಕಿಚ್ಚ ಸುದೀಪ್ ಬಿಲ್ಲ ರಂಗ ಭಾಷ ಸಿನಿಮಾಗಾಗಿ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ. ಈ ಸಿನಿಮಾ ಹೆಸರೇ ಹೇಳುವಂತೆ ಮಾಸ್ ಅಂಶಗಳೆಲ್ಲವೂ ಇರುವ ಸಿನಿಮಾ. ಹೀಗಾಗಿ ಸಿನಿಮಾಗೆ ತಕ್ಕಂತೆ ಸುದೀಪ್ ಬಾಡಿ ಬಿಲ್ಡ್ ಮಾಡಿದ್ದಾರೆ.

ಈಗಾಗಲೇ ಚಿತ್ರತಂಡ ಒಂದು ಪೋಸ್ಟರ್ ಹರಿಯಬಿಟ್ಟಿದ್ದು ಬಿಟ್ಟರೆ ಬೇರೆ ಯಾವುದೇ ಅಪ್ ಡೇಟ್ ಕೊಟ್ಟಿಲ್ಲ. ಈಗಾಗಲೇ ಸಿನಿಮಾ ಶೂಟಿಂಗ್ ಕೂಡಾ ಆರಂಭವಾಗಿದೆ. ಇದರ ನಡುವೆ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಇಷ್ಟರಲ್ಲೇ ಕಾದಿದೆ ಎನ್ನಲಾಗಿದೆ.

ಜುಲೈ 4 ರಂದು ಸಿನಿಮಾ ಬಗ್ಗೆ ವಿಶೇಷ ಅಪ್ ಡೇಟ್ ಒಂದು ಸಿಗಲಿದೆ ಎಂದು ಈಗ ಸುದ್ದಿಯಾಗಿದೆ. ಮ್ಯಾಕ್ಸ್ ಸಿನಿಮಾ ಬಳಿಕ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಸಿನಿಮಾ ಇದಾಗಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕೂಡಾ ಎದಿರು ನೋಡುತ್ತಿದ್ದಾರೆ. ಇದೀಗ ಜುಲೈ 4 ರಂದು ನೀಡಲಿರುವ ಆ ಅಪ್ ಡೇಟ್ ಏನು ಎಂಬ ಬಗ್ಗೆ ಸದ್ಯದಲ್ಲೇ ಗೊತ್ತಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ