ಕೆಲಸದ ಬಗ್ಗೆ ವಿಮರ್ಶಾತ್ಮಕ ಮನೋಭಾವ ಹೊಂದಿದ್ದೇನೆ - ಜೆಮ್ಮಿ ಶೇರ್ಗಿಲ್

ಶನಿವಾರ, 9 ಜುಲೈ 2016 (16:14 IST)
ನಾನು ನನ್ನ ಕೆಲಸದ ಬಗ್ಗೆ ಬಹಳ ವಿಮರ್ಶಾತ್ಮಕ ಮನೋಭಾವ ಹೊಂದಿದ್ದೇನೆ ಎಂದು ಜೆಮ್ಮಿ ಶೇರ್ಗಿಲ್ ತಿಳಿಸಿದ್ದಾರೆ. ಚಿತ್ರಗಳನ್ನು ತುಂಬಾ ಚೆನ್ನಾಗಿ ತೆರೆ ಮೇಲೆ ಮೂಡಿ ಬರುವಂತೆ ಅವರು ಸದಾ ಗಮನ ಹರಿಸುತ್ತಾರೆ ಎಂದು ತಿಳಿಸಿದ್ದಾರೆ. 'ಮಂದಾರಿ' ಚಿತ್ರದ ಪ್ರಚಾರದ ವೇಳೆ ಈ ಹೇಳಿಕೆ ನೀಡಿದ್ದಾರೆ. 

ನನ್ನ ಕೆಲಸದ ಬಗ್ಗೆ ವಿಮರ್ಶಾತ್ಮಕ ದೃಷ್ಟಿಕೋನ ಹೊಂದಿದ್ದೇನೆ. ಆದ್ದರಿಂದ ಇನ್ನೂ ಉತ್ತಮವಾಗಿ ಮಾಡುವುದರ ಕುರಿತು ಗಮನಹರಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. 
 
ನನ್ನ ಚಿತ್ರ ಎಷ್ಟೇ ದೊಡ್ಡದಾಗಿದ್ದರು ಚಿತ್ರವನ್ನು ನೋಡಲು ಬಯಸುವುದಿಲ್ಲ. ನನ್ನ ಚಿತ್ರಗಳನ್ನು ವೀಕ್ಷಿಸುವುದಿಲ್ಲ.. ನಾನು ಬಹಳ ಭಾಗ್ಯಶಾಲಿಯಾಗಿದ್ದೇನೆ. ಅಭಿನಯವನ್ನು ಜನರು ಮೆಚ್ಚಿದ್ದಾರೆ. ಆದ್ದರಿಂದ ಪ್ರೇಕ್ಷಕರಿಗಾಗಿ ಹಾಗೂ ನೋಡುಗರಿಗಾಗಿ ನಾನು ಅಭಾರಿಯಾಗಿದ್ದೇನೆ ಎಂದು  ಜೆಮ್ಮಿ ಶೇರ್ಗಿಲ್ ತಿಳಿಸಿದ್ದಾರೆ. 

ಅಂದಹಾಗೆ  ಜೆಮ್ಮಿ ಶೇರ್ಗಿಲ್ ಮುಂಬರುವ ಬಹುನಿರೀಕ್ಷಿತ ಚಿತ್ರ ಮಂದಾರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜುಲೈ 22ಕ್ಕೆ ಚಿತ್ರ ರಿಲೀಸ್ ಕಾಣಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ