ನಾನು ಭಾರತದ ರಾಷ್ಟ್ರಪತಿಯಾಗಬೇಕು – ಕತ್ರೀನಾ ಕೈಫ್

ಮಂಗಳವಾರ, 9 ಫೆಬ್ರವರಿ 2016 (11:10 IST)
ಕತ್ರೀನಾ ಕೈಫ್ ಹಾಗೂ ಆದಿತ್ಯಾ ಕಪೂರ್ ಅಭಿನಯದ ಫಿತೂರ್ ಸಿನಿಮಾ ರಿಲೀಸ್ ಆಗೋದಕ್ಕೆ ಇನ್ನು ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಸಿನಿಮಾದ ಪ್ರಮೋಷನ್ ಗಾಗಿ ಕ್ಯಾಟ್ ಹಾಗೂ ಆದಿ ಊರೂರು ಸುತ್ತಿದ್ದಾರೆ. ಹೀಗಿರುವಾಗಲೇ ಕತ್ರೀನಾ ಕೈಫ್  ಸಿನಿಮಾದಲ್ಲಿನ ತಮ್ಮ ಪಾತ್ರದ ಕುರಿತು ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ.
 

 
ಸಿನಿಮಾದಲ್ಲಿನ ಪಾತ್ರದ ಬಗ್ಗೆ ಮಾತನಾಡಿರುವ ಕತ್ರೀನಾ ಈ ಸಿನಿಮಾ ನನ್ನ ವೃತ್ತಿ ಬದುಕಿನ ಅತ್ಯಂತ ವಿಭಿನ್ನವಾದ ಸಿನಿಮಾ. ನನ್ನ ಜೀವನದಲ್ಲಿ ಇಂತಹದ್ದೊಂದು ಪಾತ್ರ ಮಾಡಬೇಕು ಅಂದುಕೊಂಡಿದ್ದೆ. ಅದೇ ರೀತಿ ಪಾತ್ರ ನನ್ನದು. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ನಾನು ಈ ಸಿನಿಮಾದಲ್ಲಿ ಅಭಿನಯಿಸಿದ್ದೇನೆ.ಒಬ್ಬಳು ದೇಶದ ರಾಷ್ಟ್ರಪತಿಯಾಗಬೇಕು ಅನ್ನೋ ಆಸೆಯನ್ನು ಇಟ್ಟುಕೊಂಡಿರುತ್ತಾಳೆ. ಅದೇ ರೀತಿ ಪಾತ್ರ ನನ್ನದು. ಹಾಗಾಗಿ ಈ ಪಾತ್ರದ ಬಗ್ಗೆ ನಾನು ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ ಅಂತಾ ಕ್ಯಾಟ್ ಹೇಳಿದ್ದಾರೆ. 
 
ಫಿತೂರ್ ಸಿನಿಮಾವನ್ನು ಅಭಿಷೇಕ್ ಕಪೂರ್ ನಿರ್ದೇಶನ ಮಾಡಿದ್ದಾರೆ. ಫಿತೂರ್ ಸಿನಿಮಾದಲ್ಲಿ ಕತ್ರೀನಾ ಹಾಗೂ ಆದಿತ್ಯಾ ರಾಯ್ ಕಪೂರ್ ನಾಯಕಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾದಲ್ಲಿ ಟಬು ಕೂಡ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ಇದೇ ವಾರ ಅಂದ್ರೆ ಫೆಬ್ರವರಿ 12 ರಂದು ವಿಶ್ವದಾದ್ಯಂತ ತೆರೆ ಕಾಣುತ್ತಿದೆ.
 

ವೆಬ್ದುನಿಯಾವನ್ನು ಓದಿ