ನಾನು ನನ್ನ ಮಕ್ಕಳನ್ನು ಹೀರೋಯಿನ್ ಆಗಿ ಪ್ರಮೋಟ್ ಮಾಡಲ್ಲ !

ಶನಿವಾರ, 4 ಅಕ್ಟೋಬರ್ 2014 (10:52 IST)
ಸಾಮಾನ್ಯವಾಗಿ ಸ್ಟಾರ್ ಹೀರೋ ಹೀರೋಯಿನ್ ಗಳು ತಮ್ಮ ಮಕ್ಕಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುವುದು ಪದ್ಧತಿ. ಅದು ಯಾವುದೇ ಒಂದು ಭಾಷೆಗೆ ಸೀಮಿತವಾಗಿಲ್ಲ. ಆದರೆ ಒಂದು ಹೀರೋಯಿನ್ ಮಾತ್ರ ತನ್ನ ಮಕ್ಕಳನ್ನು ಹೀರೋಯಿನ್ ಆಗಿ ಪ್ರಮೋಟ್ ಮಾಡಲ್ಲ ಜೊತೆಗೆ ಅವರು ಯಾವ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಅದಕ್ಕೆ ತಾನು ಪ್ರೋತ್ಸಾಹ ಮಾಡುವುದಾಗಿ ಹೇಳಿದ್ದಾರೆ. 

ರವಿಚಂದ್ರನ್, ಅನಂತ್ ನಾಗ್ ಸೇರಿದಂತೆ ದಕ್ಷಿಣದ ಟಾಪ್ ಹೀರೋಗಳ ಜೊತೆ ಅಭಿನಯಿಸಿರುವ ಖುಷ್ ಬೂ ತನ್ನ ಇಬ್ಬರು ಹೆಣ್ಣು ಮಕ್ಕಳ ಬಗ್ಗೆ ಈ ರೀತಿಯ ನಿರ್ಧಾರ ಹೊಂದಿದ್ದಾರೆ. ಎರಡು ಹೆಣ್ಣುಮಕ್ಕಳ ತಾಯಿ ಆಗಿರುವ ಖುಷ್ ಬೂ ಅವರ ಪುತ್ರಿಯರು ಈಗ ಹರೆಯದ ಬೊಂಬೆಗಳು. 
 
ಇನ್ನು ತಾಯಿಯ ವಾರಸುದಾರಿಕೆಯನ್ನು ಈ ಇಬ್ಬರು ಹುಡುಗಿಯರು ಹೊಂದುತ್ತಾರೆ ಎಂದು ಎಲ್ಲರು ತಿಳಿದಿದ್ದರೂ, ಆದರೆ ಈಗ ಅಮ್ಮ ಕೂಲಾಗಿ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ನನ್ನ ಹಿರಿಯ ಮಗಳು ಇಂಗ್ಲೀಷ್ ಸಾಹಿತ್ಯ ಒದುತ್ತಿದ್ದಾಳೆ. ಚಿಕ್ಕವಳು ಫಿಲಿಂ ಎಡಿಟರ್ ಆಗುತ್ತಿದ್ದಾಳೆ. ಇಬ್ಬರು ಅಪ್ಪನ ದಾರಿಯಲ್ಲೇ ಸಾಗುತ್ತಿದ್ದಾರೆ. ಅವರಿಷ್ಟದಂತೆ ನಡೆಯಲಿ ಎಂದು ಹೇಳಿದ್ದಾರೆ. ಮಕ್ಕಳ ಹೀಗೆ ಇರಬೇಕು ಹಾಗೆ ಬೆಳೆಯ ಬೇಕು ಎನ್ನುವ ತಾಯಿತಂದೆಯರಿಗಿಂತ ಈ ಖುಷ್ಬೂ ಅಮ್ಮ  ಡಿಫರೆಂಟ್ ಆಗಿದ್ದಾರೆ. 

ವೆಬ್ದುನಿಯಾವನ್ನು ಓದಿ