ಕಷ್ಟಪಟ್ಟು ಕೆಲಸ ಮಾಡುವುದರಿಂದ ಗೆಲುವು ದಕ್ಕಿದೆ

ಬುಧವಾರ, 27 ಆಗಸ್ಟ್ 2014 (11:19 IST)
ಆಲಿಯಾ ಭಟ್ ಬಾಲಿವುಡ್ ನಲ್ಲಿ ನ ಲಕ್ಕಿ ಗರ್ಲ್. 21  ವರ್ಷದ ಈ ಹುಡುಗಿ ನಟಿಸಿರುವ ಚಿತ್ರಗಳೆಲ್ಲವೂ ಗೆಲುವನ್ನು ಸಾಧಿಸಿದೆ. ಸ್ಟೂಡೆಂಟ್ ಆಫ್ ದಿ ಇಯರ್, ಹೈವೇ, ಹಂಪ್ಟಿ ಶರ್ಮ ಕಿ ದುಲ್ಹನಿಯಾ, 2  ಸ್ಟೇಟ್ಸ್ ಎಲ್ಲವು ಬಾಕ್ಸಾಫೀಸಲ್ಲಿ ಸಾಕಷ್ಟು ಗಳಿಕೆ ಮಾಡಿರುವಂತಹ ಚಿತ್ರಗಳಾಗಿವೆ.


ಆಕೆಯ ಅಭಿನಯದ ಜೊತೆಗೆ ಅದೃಷ್ಟವೂ ಸಹಿತ ಜೊತೆ ಆದ ಕಾರಣ ಗೆಲುವು ಹೊಂದಲು ಸಾಧ್ಯವಾಗಿದೆ. ಆದರೂ ಸಹಿತ ಆಕೆಯು ಅದರ ಬಗ್ಗೆ ಅತಿಯಾದ ಹೆಮ್ಮೆ ಪಡುವ ಕೆಲಸದಲ್ಲಿ ಇಲ್ಲ. ಬದಲಾಗಿ ವಿನಮ್ರವಾಗಿ ಅದೃಷ್ಟ ಇತ್ತು ಗೆಲುವು ಸಿಕ್ಕಿದೆ, ಈ ಕಾರಣದಿಂದ ಅತ್ಯುತ್ತಮ ನಿರ್ದೇಶಕರ ಅಡಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾಳೆ ಆಕೆ.   
 
 ನಿರ್ದೇಶಕರುಗಳು ನನ್ನಿಂದ ನಟನೆಯನ್ನು ಹೊರ ಹೊಮ್ಮಿಸಿದ್ದಾರೆ. ಈ ರಂಗದಲ್ಲಿ ಒಳ್ಳೆಯ ಸ್ಥಾನ ಪಡೆಯಲು ಕಾರಣರಾದ ಕರಣ್ ಜೋಹರ್ ಅವರಿ ಧನ್ಯವಾದಗಳನ್ನು ಅರ್ಪಿಸುತ್ತಾ ಕಷ್ಟಪಟ್ಟು ಕೆಲಸ ಮಾಡುವುದರಿಂದ ಗೆಲುವು ದಕ್ಕಿದೆ ಎಂದು ಹೇಳಿದ್ದಾಳೆ ಈ ಚೆಲುವೆ.ಆಲಿಯ ಮೊದಲ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್  ನ್ನು ಕರಣ್ ಜೋಹರ್  ನಿರ್ಮಾಣ ಮಾಡಿದ್ದರು. ಆ ಚಿತ್ರ ಅಪಾರವಾದ ಯಶಸ್ಸು ಪಡೆದಿತ್ತು.ಇಲ್ಲಿ ಎಷ್ಟೇ ಯಶಸ್ಸು ಸಿಕ್ಕರೂ ಯಾವ ಗಳಿಗೆಯಲ್ಲಿ ಏನಾಗುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಎನ್ನುವ ಭವಿಷ್ಯ ವಾಣಿಯನ್ನು ನುಡಿದಿರುವ ಈ ಚೆಲುವೆ ಈಗ ಶಾಹಿದ್ ಕಪೂರ್ ಮತ್ತು ರಣಬೀರ್ ಕಪೂರ್ ಅವರ ಜೊತೆ ನಟಿಸುವ ಅವಕಾಶ ಪಡೆದಿದ್ದಾಳೆ.

ವೆಬ್ದುನಿಯಾವನ್ನು ಓದಿ