ಅಜಯ್, ಟಬು ಅವರ ಸಹೋದರ ಸಂಬಂಧಿ ಸಮೀರ್ ಆರ್ಯಾ ಅವರ ಪಕ್ಕದ ಮನೆಯಲ್ಲಿ ವಾಸವಿದ್ದರಂತೆ ಟಬು ಮತ್ತು ಸಮೀರ್ ಗೆ ಅಜಯ್ ತುಂಬಾ ಅತ್ಮೀಯ ಸ್ನೇಹಿತರಾಗಿದ್ದರಂತೆ. ಟಬು ಹೇಳೋ ಪ್ರಕಾರ ನಾನು ಯಂಗ್ ಆಗಿದ್ದಾಗ ಸಮೀರ್ ಮತ್ತು ಅಜಯ್ ನನ್ನ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿದ್ದರು. ನಾನು ಹೋದ ಕಡೆಗೆಲ್ಲ ನನ್ನನ್ನು ಹಿಂಬಾಲಿಸುತ್ತಾ ಪತ್ತೆದಾರಿ ಕೆಲಸ ಮಾಡುತ್ತಿದ್ದರು. ಯಾವುದೇ ಹುಡುಗ ನನ್ನ ಜತೆ ಮಾತಾಡಿದರೆ ಸಾಕು, ಅವನನ್ನು ಹೊಡೆದು, ಬೆದರಿಸಿ ಬರುತ್ತಿದ್ದರು. ಇದೇ ಕಾರಣಕ್ಕೆ ನಾನಿನ್ನೂ ಸಿಂಗಲ್ ಆಗಿದ್ದೇನೆ ಎಂದು ಹೇಳಿ ನಕ್ಕಿದ್ದಾರೆ. ಅಲ್ಲದೇ ಈಗ ಅಜಯ್ ಗೆ ತಮ್ಮ ತಪ್ಪಿನ ಅರಿವಾಗಿರಬೇಕು ಎಂದು ಹೇಳಿದ್ದಾರೆ. ಒಟ್ಟಲ್ಲಿ ಟಬು ಹೇಳಿಕೆ ನಿಜಕ್ಕೂ ಎಲ್ಲರಿಗೂ ಶಾಕ್ ಜತೆಗೆ ನಗುನೂ ತರಿಸತ್ತೆ.