ಮನೀಶಾ ಕೋಯಿರಾಲ ಆತ್ಮಕತೆ ಸಿನಿಮಾವಾದರೆ ಈ ನಟಿ ಮಾತ್ರ ಆ ಪಾತ್ರಕ್ಕೆ ಜೀವತುಂಬಬಲ್ಲರಂತೆ!

ಬುಧವಾರ, 27 ಜೂನ್ 2018 (15:51 IST)
ಮುಂಬೈ : ಬಾಲಿವುಡ್ ನಟಿ ಮನೀಶಾ ಕೋಯಿರಾಲ ಅವರು ತಮ್ಮ ಆತ್ಮಕತೆ ಒಂದುವೇಳೆ ಚಿತ್ರವಾದರೆ ತನ್ನ ಪಾತ್ರಕ್ಕೆ ಬಾಲಿವುಡ್ ನಟಿ ಆಲಿಯಾ ಭಟ್ ಅವರು ಮಾತ್ರ ಜೀವ ತುಂಬಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.


ಕ್ಯಾನ್ಸರ್ ಕಾಯಿಲೆಯಿಂದ ಅನಾರೋಗ್ಯಕ್ಕೀಡಾಗಿ ಅದೃಷ್ಟವಶಾತ್ ಯಶಸ್ವಿಯಾಗಿ ಗುಣಮುಖರಾಗಿ ಮತ್ತೆ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಮನೀಶಾ ಕೋಯಿರಾಲ ಅವರು ತಮ್ಮ ಬದುಕಿನ ಕುರಿತಂತೆ ‘ಹೀಲ್ ಡ್’ ಎಂಬ ಹೆಸರಿನ ಪುಸ್ತಕವೊಂದನ್ನು ಬರೆಯಲು ಮುಂದಾಗಿದ್ದಾರೆ.


ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮನೀಶಾ, ಹೌದು ನಾನು ನನ್ನ ಬದುಕಿನ ಕುರಿತಂತೆ ಪುಸ್ತಕ ಬರೆಯಲು ಮುಂದಾಗಿದ್ದೇನೆ. ಇದರಲ್ಲಿ ನನ್ನ ಜೀವನದ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾಗಿ ಅವರು ಹೇಳಿದ್ದಾರೆ. ಹಾಗೇ ನನ್ನ ಜೀವನ ಕತೆ ಇದಾಗಿದೆ ಎಂಬುದನ್ನು ನಾನು ಹೇಳುತ್ತಿಲ್ಲ. ಸಂಜಯ್ ರೀತಿಯಲ್ಲಿ ಎಲ್ಲರೂ ಬೋಲ್ಟ್ ಆಗಿ ತಮ್ಮ ಜೀವನಕತೆಯನ್ನು ಹೇಳಲು ಮುಂದಾಗುವುದಿಲ್ಲ. ನನ್ನ ಜೀವನತ ಕತೆ ಬಯೋಪಿಕ್ ಅಗುತ್ತದೆ ಎಂಬುದರ ಬಗ್ಗೆಯೂ ನನಗೆ ನಂಬಿಕೆ ಇಲ್ಲ ಎಂದಿದ್ದಾರೆ
ಒಂದು ವೇಳೆ ಚಿತ್ರವಾದರೆ ಎಲ್ಲಾ ಪಾತ್ರಗಳನ್ನು ಅದ್ಭುತವಾಗಿ ಮಾಡಬಲ್ಲ ಆಲಿಯಾ ಭಟ್ ಉತ್ತಮ ನಟಿ ಮಾತ್ರವಲ್ಲ ನನ್ನ ಪಾತ್ರಕ್ಕೆ ಜೀವ ತುಂಬಬಲ್ಲರು ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ