ಬಾತ್ ಟಬ್‌ನಲ್ಲಿ ಸಖತ್ ಹಾಟ್ ಇಲಿಯಾನಾ

ಗುರುವಾರ, 26 ಜನವರಿ 2017 (11:03 IST)
ಟಾಲಿವುಡ್, ಬಾಲಿವುಡ್ ಬೆಡಗಿ ಇಲಿಯಾನಾ ಬಾಯ್‌ಫ್ರೆಂಡ್ ಆಂಡ್ರೂ ನಿಬೋನ್ ಒಬ್ಬ ಪ್ರೊಫೆಷನಲ್ ಫೋಟೋಗ್ರಾಫರ್. ಅವರಿಗೆ ಸ್ವಲ್ಪ ಸಮಯ ಸಿಕ್ಕಿದರೆ ಸಾಕಂತೆ...ಇಲಿಯಾನಾರನ್ನ ನಾನಾ ಕೋನಗಳಲ್ಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ಮುಂದಾಗಿಬಿಡುತ್ತಾರಂತೆ.
 
ಈಗಾಗಲೆ ಅವರು ತೆಗೆದಿರುವ ಫೋಟೋಗಳು ಸಾಕಷ್ಟು ಹೊರಬಿದ್ದಿವೆ. ಅವುಗಳನ್ನು ಸ್ವತಃ ಇಲಿಯಾನಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ಇಲಿಯಾನಾ ಸೌಂದರ್ಯದ ಜೊತೆಗೆ ಆಂಡ್ರೂ ಫೋಟೋಗ್ರಫಿ ಪ್ರತಿಭೆ ಸಹ ಅನಾವರಣವಾಗಿತ್ತು.
 
ಕೆಲವು ಫೋಟೋಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಜೋಡಿ ಹೊಸ ಫೋಟೋಶೂಟ್ ಮಾಡಿದೆ. ಅದು ಒಂಚೂರು ಹಾಟ್ ಆಗಿದ್ದು, ಹಿಂದೆಂದೂ ಇಲ್ಲದಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಇಲಿಯಾನಾ. ಮೈಮೇಲೆ ಯಾವುದೇ ಬಟ್ಟೆ ಇಲ್ಲದಂತೆ ಬಾತ್‌ಟಬ್ ನಲ್ಲಿ ಮಲಗಿರುವ ಫೋಟೋ ಅದು. ಈಗ ಆ ಫೋಟೋಗಳು ವೈರಲ್ ಆಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ