ಬೆತ್ತಲೆ ಆಗಲು ಹೊರಟಿರುವ ಇಲಿಯಾನ...ಬಿಕಿನಿಗೆ ಸಿಕ್ಕದ ಯಶಸ್ಸು ಬೆತ್ತಲೆಗೆ ಸಿಗಬಹುದಾ?

ಶನಿವಾರ, 19 ಜುಲೈ 2014 (11:16 IST)
ದಕ್ಷಿಣ ಭಾರತ ಬಹು ಬೇಡಿಕೆಯ ನಟಿಯಾಗಿದ್ದ ಇಲಿಯಾನ ತಾನು ಗೆಲುವಿನ ಉತ್ತುಂಗದಲ್ಲಿ ಇರುವಾಗಲೇ ಬಾಲಿವುಡ್ ಕಡೆ ಹೊರಟು ಹೋದಳು. ಅಲ್ಲಿ ತನಗೊಂದು ಸ್ಥಾನ ಪಡೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾಳೆ, ಆದರೆ ನಿರೀಕ್ಷಿಸಿದಷ್ಟು ಗೆಲುವು ಹೊಂದಲು ಆಕೆಗೆ ಸಾಧ್ಯವೇ ಆಗಿಲ್ಲ. ಆಕೆ ತನ್ನ ರೂಪರಾಶಿಯನ್ನು ತೆರೆಯೆ ಮೇಲೆ ತೋರಿಸಿದರು ಸಹ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಲೇ ಇಲ್ಲ ಬಾಲಿವುಡ್ ನಲ್ಲಿ.


ಎಲ್ಲರಿಗು ಗೊತ್ತಿರುವಂತೆ ಆಕೆ  ಹಮ್ ಶಕಲ್ಸ್ ಚಿತ್ರದಲ್ಲಿ ಬಿಕಿನಿ ಮುಖಾಂತರ ತನ್ನ ರೂಪ ತೆರೆದಿಟ್ಟಳು. ಆದರೆ ಅದ್ಯಾಕೋ ಆ ಸಿನಿಮಾದಲ್ಲಿ ಗೆಲುವು ಕಾಣುವುದು ಕಷ್ಟ ಆಯ್ತು . ಅದಾದ ಬಳಿಕ ಇಲಿಯಾನ ಈಗ ಹೊಸ ಸಾಹಸಕ್ಕೆ ಸಿದ್ಧತೆ ನಡೆಸಿದ್ದಾಳೆ. ಆಕೆ ತನ್ನ  ಮುಂದಿನ ಚಿತ್ರದಲ್ಲಿ ಬೆತ್ತಲೆ ಆಗಲು ಸಿದ್ಧತೆ ನಡೆಸಿದ್ದಾಳೆ .. ಹಾಗೆಂದು ಬಾಲಿವುಡ್ ನಲ್ಲಿ ಗುಸುಗುಸು ಪಿಸಿ ಪಿಸಿ ಮಾತುಗಳು ಕೇಳಿ ಬರುತ್ತಿವೆ. 

ಹೇಗಾದರೂ ಸರಿಯೇ ಬೀ ಟೌನ್ ನಲ್ಲಿ ಜಾಗ ಮಾಡಿಕೊಳ್ಳ ಬೇಕು ಎಂದು ಬಯಸಿರುವ ಇಲಿ ಈಗ ತನ್ನ ಬಟ್ಟೆಗಳನ್ನು ಬಿಚ್ಚಿ ಬಿಸಾಡಲು ಹೆದರುತ್ತಿಲ್ಲ! ಆದರೆ ಬಿಕಿನಿಯಿಂದ ಜನರನ್ನು ಸೆಳೆಯಲು ಆಗದ ಆಕೆಗೆ  ಬೆತ್ತಲೆಯಾಗಿ  ಆಕರ್ಷಿಸಲು ಸಾಧ್ಯವೇ ಎನ್ನುವುದೇ ಈಗ ಎಲ್ಲರನ್ನು ಕಾಡುತ್ತಿರುವ ಸಂಗತಿ ಆಗಿದೆ. 

ವೆಬ್ದುನಿಯಾವನ್ನು ಓದಿ