ಶೂಟಿಂಗ್ ವೇಳೆ ಗಾಯಗಳಾಗೋದು ಮಾಮೂಲಿ- ಹೃತಿಕ್ ರೋಷನ್

ಮಂಗಳವಾರ, 16 ಫೆಬ್ರವರಿ 2016 (20:26 IST)
ಮೊನ್ನೆಯಷ್ಟೇ ನಟ ಹೃತಿಕ್ ರೋಷನ್ ಅವರು ತಮ್ಮ ಮೊಹೆಂಜಾದಾರೋ ಸಿನಿಮಾದ ಶೂಟಿಂಗ್ ವೇಳೆ ಬಿದ್ದು ಗಾಯಮಾಡಿಕೊಂಡಿದ್ದರು.ಆದ್ರೀಗ ಅವರು ಆರಾಮಾಗಿದ್ದಾರೆ ಅಂತಾ ಸ್ವತಃ ಅವರೇ ಹೇಳಿಕೊಂಡಿದ್ದಾರೆ.ಅಲ್ಲದೇ ಸಿನಿಮಾದಲ್ಲಿ ಇದೆಲ್ಲಾ ಮಾಮೂಲಿ ಎಂದಿದ್ದಾರೆ.
 
ನಿನ್ನೆ ಗಣ್ಯರಿಗಾಗಿ  ಸೋನಮ್ ಕಪೂರ್ ಅವರ ನೀರ್ಜಾ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಅನ್ನು ಏರ್ಪಡಿಸಲಾಗಿತ್ತು.ಅದರಲ್ಲಿ ನಟ ಹೃತಿಕ್ ರೋಷನ್ ಅವರು ಕೂಡ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ನಾನು ಮೊಹೆಂಜದಾರೋ ಸಿನಿಮಾದ ಶೂಟಿಂಗ್ ವೇಳೆ ಗಾಯಗೊಂಡಿದ್ದೆ.ಆದ್ರೆ ಈಗ ನಾನು ಚೇತರಿಸಿಕೊಂಡಿದ್ದೇನೆ. ಸಿನಿಮಾದ ಶೂಟಿಂಗ್ ವೇಳೆ ಈ ರೀತಿ ಸಣ್ಣಪುಟ್ಟ ತೊಂದರೆಗಳಾಗೋದು ಮಾಮೂಲಿ ಅಂತಾ ಅವರು ಹೇಳಿದ್ದಾರೆ.ಈಗ ನಾನು ಮತ್ತೆ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದೇನೆ ಅಂತಾ ಅವರು ಹೇಳಿದ್ದಾರೆ.
 
ಇನ್ನು ನೀರ್ಜಾ ಸಿನಿಮಾವನ್ನು ವೀಕ್ಷಿಸಿ ಮಾತನಾಡಿದ ಅವರು ಸಿನಿಮಾದಲ್ಲಿ ಸೋನಮ್ ಕಪೂರ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.ನನಗೆ ಈ ಸಿನಿಮಾದ ಹೆಮ್ಮೆಯಿದೆ.

ಸೋನಮ್ ಅದ್ಭುತವಾಗಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.ಇನ್ನು ಸಿನಿಮಾ ತಂಡದ ಬಗ್ಗೆ ನನಗೆ ಸಾಕಷ್ಟು ಕುತೂಹಲವಿದೆ. ನಿಜವಾಗಿಯೂ ಇದು ಮರೆಯಲಾಗದ ಸಿನಿಮಾ ಅಂತಾ ಹೇಳಿದ್ದಾರೆ.ಇದು ನಿಜವಾಗಿಯೂ ತುಂಬಾ ಭಾವನಾತ್ಮಕ ಸಿನಿಮಾ ಅಂತಾ ಅವರು ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ