ಪಾಕಿಸ್ತಾನದಲ್ಲಿ ಬಾಲಿವುಡ್ ಸಿನಿಮಾಗಳು ಮತ್ತೆ ಆರಂಭ

ಮಂಗಳವಾರ, 20 ಡಿಸೆಂಬರ್ 2016 (10:31 IST)
ಎರಡು ತಿಂಗಳ ಹಿಂದೆ ಭಾರತೀಯ ಸಿನಿಮಾಗಳಿಗೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿತ್ತು. ಇದೀಗ ಅ ನಿಷೇಧವನ್ನು ತೆರವು ಮಾಡುತ್ತಿರುವುದಾಗಿ ಆ ದೇಶದ ಥಿಯೇಟರ್ ಮಾಲೀಕರ ಸಂಘ ನಿರ್ಣಯಿಸಿದೆ. ಸೋಮವಾರದಿಂದ ಭಾರತೀಯ ಸಿನಿಮಾಗಳು ಪಾಕ್‍ನಲ್ಲಿ ಪ್ರದರ್ಶನ ಕಾಣುತ್ತಿವೆ.
 
ಮುಖ್ಯವಾಗಿ ಪಾಕ್‍ನಲ್ಲಿ ಭಾರತೀಯ ಸಿನಿಮಾಗಳಿಗೆ ಒಳ್ಳೇ ಮಾರುಕಟ್ಟೆ ಇದೆ. ಅದರಲ್ಲೂ ಬಾಲಿವುಡ್ ಸಿನಿಮಾಗಳನ್ನು ಅಲ್ಲಿನ ಜನ ಮುಗಿಬಿದ್ದು ನೋಡುತ್ತಾರೆ. "ಅಲ್ಲಿನ ಸಿನಿಮಾ ವಹಿವಾಟು ಭಾರತೀಯ ಸಿನಿಮಾಗಳ ಮೇಲೆ ಅವಲಂಭಿಸಿದೆ. ಸಿನಿ ಪ್ಲೆಕ್ಸ್, ಮಲ್ಟಿಪ್ಲೆಕ್ಸ್, ಥಿಯೇಟರ್ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದೇವೆ. ಈ ಹಿನ್ನೆಲೆಯಲ್ಲಿ ನಿಷೇಧ ತೆರವುಗೊಳಿಸುತ್ತಿದ್ದೇವೆ" ಎಂದಿದ್ದಾರೆ ಪಾಕ್ ಸಿನಿಮಾ ಪ್ರದರ್ಶಕರ ಸಂಘ ಹೇಳಿದೆ.
 
ಉರಿ ಉಗ್ರ ದಾಳಿಯ ಬಳಿಕ ಭಾರತ-ಪಾಕ್ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಚಿತ್ರಗಳ ಮೇಲೆ ಪಾಕ್ ನಿಷೇಧ ಹೇರಿತ್ತು. ಭಾರತೀಯ ಚಿತ್ರಗಳಲ್ಲೂ ಪಾಕ್ ಕಲಾವಿದರು ಅಭಿನಯಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಾಲಿವುಡ್ ಬಂದಿರುವುದು ಗೊತ್ತೇ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ