ಐಪಿಎಲ್: ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದಲ್ಲಿರುವ ಆ ಬಾಹುಬಲಿ ಯಾರು ಗೊತ್ತೇ?

ಭಾನುವಾರ, 7 ಏಪ್ರಿಲ್ 2019 (05:19 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬೃಹತ್ ಮೊತ್ತ ಯಶಸ್ವಿಯಾಗಿ ಬೆನ್ನತ್ತಲು ಕೆಕೆಆರ್ ತಂಡಕ್ಕೆ ನೆರವಾದ ಆಂಡ್ರೆ ರಸೆಲ್ ರನ್ನು ಮಾಲಿಕ ಶಾರುಖ್ ಖಾನ್ ಬಾಹುಬಲಿಗೆ ಹೋಲಿಸಿದ್ದಾರೆ.


ಆರ್ ಸಿಬಿ ವಿರುದ್ಧ ಗೆಲ್ಲಲು ನಿರ್ಣಾಯಕ ಪಾತ್ರವಹಿಸಿದ ರಸೆಲ್ ರನ್ನು ಶಾರುಖ್ ‘ಬಾಹುಬಲಿ’ ಎಂದು ಹೊಗಳಿದ್ದಾರೆ. ರಸೆಲ್ 13 ಬಾಲ್ ಗಳಲ್ಲಿ 48 ರನ್ ಚಚ್ಚಿ ಆರ್ ಸಿಬಿ ಸೋಲಿಗೆ ಕಾರಣರಾಗಿದ್ದರು.

ಈ ಗೆಲುವಿನಿಂದ ಖುಷಿಯಾಗಿರುವ ಶಾರುಖ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ರಸೆಲ್ ರನ್ನು ಬಾಹುಬಲಿ ವೇಷದಲ್ಲಿ ಎಡಿಟ್ ಮಾಡಿರುವ ಫೋಟೋ ಪ್ರಕಟಿಸಿ ‘ಬಾಹುಬಲಿ’ ಎಂದು ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ