ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ

ಬುಧವಾರ, 29 ಏಪ್ರಿಲ್ 2020 (13:25 IST)
ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಇಂದು ಮಧ್ಯಾಹ್ನ ಮುಂಬೈನ ಧೀರೂಬಾಯ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಕಳೆದ ಕೆಲವು ತಿಂಗಳುಗಳಿಂದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ 54 ವರ್ಷದ ಇರ್ಫಾನ್ ಖಾನ್ ತೀವ್ರ ಅಸ್ವಸ್ಥರಾದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮೊನ್ನೆಯಷ್ಟೇ ಅವರ ತಾಯಿ ಕ್ಯಾನ್ಸರ್ ನಿಂದಾಗಿ ತೀರಿಕೊಂಡಿದ್ದರು. ಈಗ ಪುತ್ರನೂ ಅಮ್ಮನ ಹಿಂದೆಯೇ ನಡೆದಿದ್ದು ವಿಪರ್ಯಾಸ. ಇತ್ತೀಚೆಗಷ್ಟೇ ಅವರ ಅಭಿನಯದ ಅಂಗ್ರೇಜಿ ಮೀಡಿಯಂ ಸಿನಿಮಾ ತೆರೆ ಕಂಡಿತ್ತು. ಅವರ ಸಾವಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ