ವಾರಿಜಾ ವೇಣುಗೋಪಾಲ್ ರನ್ನು ಮದುವೆಯಾದ ರಘು ದೀಕ್ಷಿತ್: ಯಾರೆಲ್ಲಾ ಬಂದಿದ್ರು ನೋಡಿ

Krishnaveni K

ಶುಕ್ರವಾರ, 24 ಅಕ್ಟೋಬರ್ 2025 (15:32 IST)
Photo Credit: Facebook

ಬೆಂಗಳೂರು: ಕನ್ನಡದ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಇಂದು ಗಾಯಕಿ ವಾರಿಜಾ ವೇಣುಗೋಪಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ರೆಸಾರ್ಟ್ ಒಂದರಲ್ಲಿ ತೀರಾ ಖಾಸಗಿಯಾಗಿ ನಡೆದ ಕಾರ್ಯಕ್ರಮದಲ್ಲಿ ವಾರಿಜಾಗೆ ರಘು ದೀಕ್ಷಿತ್ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಅಯ್ಯಂಗಾರ್ ಶೈಲಿಯಲ್ಲಿ ಮದುವೆ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ನೆರವೇರಿದೆ.

ಇದು ರಘು ದೀಕ್ಷಿತ್ ಗೆ ಎರಡನೇ ಮದುವೆಯಾಗಿದೆ. 50 ವರ್ಷದ ರಘು ದೀಕ್ಷಿತ್ ಈಗಾಗಲೇ ನೃತ್ಯ ಪಟು ಮಯೂರಿ ಅವರ ಜೊತೆ ಮದುವೆಯಾಗಿದ್ದರು. ಆದರೆ ಆರು ವರ್ಷಗಳ ಹಿಂದೆ ಇಬ್ಬರೂ ವಿಚ್ಛೇದನ ಪಡೆದಿದ್ದರು. ಇದೀಗ ಕೊಳಲು ವಾದಕಿ, ಗಾಯಕಿ ವಾರಿಜಾ ಕೈ ಹಿಡಿದಿದ್ದಾರೆ.

ಇವರ ಮದುವೆ ಫೋಟೋಗಳನ್ನು ನಟಿ ಯಮುನಾ ಶ್ರೀನಿಧಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮದುವೆಗೆ ಯಮುನಾ ಶ್ರೀನಿಧಿ, ಯೂಟ್ಯೂಬರ್ ಅಯ್ಯೋ ಶ್ರದ್ಧಾ ಸೇರಿದಂತೆ ತೀರಾ ಆಪ್ತರು ಬಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ