ಮತ್ತೆ ಬಾಲಿವುಡ್‌ದತ್ತ ಮುಖ ಮಾಡ್ತಾರಾ ಕರೀಷ್ಮಾ ಕಪೂರ್?

ಶನಿವಾರ, 25 ಜೂನ್ 2016 (13:05 IST)
ಒಂದು ಕಾಲದಲ್ಲಿ ತನ್ನ ಅಮೋಘ ಅಭಿನಯದಿಂದ ಸಿನಿ ರಸಿಕರನ್ನು ಮೋಡಿ ಮಾಡಿದ್ದ ಕರಿಷ್ಮಾ ಕಪೂರ್ 2015ರಲ್ಲಿ ಡೇಂಜರಸ್ ಇಶ್ಕ್ ಕೊನೆಯ ಚಿತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಚಿತ್ರರಂಗದತ್ತ ಮುಖ ಮಾಡಿಯೇ ಇರಲಿಲ್ಲ. ಆದ್ರೆ ಸದ್ಯದ ನ್ಯೂಸ್ ಪ್ರಕಾರ ಕರೀಷ್ಮಾ ಕಪೂರ್ ತೆರೆ ಮೇಲೆ ಬರಲು ಸಿದ್ಧತೆ ನಡೆಸಿದ್ದಾರಂತೆ. ಇಚೆಗಷ್ಟೇ ಪತಿ ಸಂಜಯ್ ಕಪೂರ್ ಜತೆಗೆ ಅವರ ಡೈವೋರ್ಸ್ ಆಗಿತ್ತು. 

 
41 ವರ್ಷದ ನಟಿ ಕರೀಷ್ಮಾ ಕಪೂರ್ 'ರಾಜಾ ಹಿಂದೂಸ್ತಾನಿ'ಯಂತಹ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಕರೀಷ್ಮಾ, ಕರೀಷ್ಮಾ ಮತ್ತೆ ಚಿತ್ರರಂಗಕ್ಕೆ ವಾಪಸ್ಸಾಗಲೂ ಎಕ್ಸೈಟ್ ಆಗಿದ್ದಾರಂತೆ.ಇನ್ನೂ ಕರೀಷ್ಮಾ ಕಪೂರ್ ರಾಜಾ ಹಿಂದೂಸ್ತಾನಿ, ಕೂಲಿ ನಂ-1. ರಾಜಾ ಬಾಬು, ಅಂದಾಜ್ ಚಿತ್ರಗಳಲ್ಲಿ ನಟಿಸಿದ್ದರು.. 

ಮೊನ್ನೆ ಕರೀಷ್ಮಾ ಹಾಗೂ ಸಂಜಯ್ ಕಪೂರ್ ನಡುವಿನ ಮೈಮನಸ್ಸಿಗೆ ಕೊನೆಗೂ ತೆರೆ ಬಿದ್ದಿತ್ತು. ಕೌಟುಂಬಿಕ ಇವರಿಬ್ಬರ ನಡುವೆ ಸಮರಸ ಸಾಧ್ಯವಾಗದೇ ಇದ್ದುದರಿಂದ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ನಾನಾ ಕಾರಣಗಳಿಂದಾಗಿ ಇಬ್ಬರಿಗೂ ಡೈವೋರ್ಸ್ ಸಿಕ್ಕಿರಲಿಲ್ಲ. ಇದೇ ವಿಚಾರ ಇಬ್ಬರ ನಡುವೆ ಇನ್ನಷ್ಟು ವೈಮನಸ್ಸಿಗೆ ಕಾರಣವಾಗಿತ್ತು.ಆದ್ರೀಗ ದಂಪತಿ ಕೊನೆಗೂ ಕಾನೂನಾತ್ಮಕವಾಗಿ ದೂರವಾಗಿದ್ದರು.
 
2003ರಲ್ಲಿ ಕರೀಷ್ಮಾ ಹಾಗೂ ಸಂಜಯ್ ಕಪೂರ್ ಅವರು ಪ್ರೀತಿಸಿ ವಿವಾಹಾಗಿದ್ದರು.2010ರಲ್ಲಿ ಇವರಿಬ್ಬರ ನಡುವೆ ಮೈಮನಸ್ಸು ಮೂಡಿ ಕರೀಷ್ಮಾ ಸಂಜಯ್ ಅವರಿಂದ ದೂರವಾಗಿದ್ದರು.ಇದೀಗ ದಂಪತಿಯ 12 ವರ್ಷದ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ.ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ