Gajendra Saramanige: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟ ಗಜೇಂದ್ರ ಮರಸಣಿಗೆ

Sampriya

ಶುಕ್ರವಾರ, 16 ಮೇ 2025 (14:51 IST)
Photo Credit X
ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಿರುತೆರೆ ನಟ ಗಜೇಂದ್ರ ಮರಸಣಿಗೆ ಅವರು ಇಂದು ಶ್ವೇತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಸುಂದರ ಫೋಟೋಗಳನ್ನು ನಟ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.

ಗಜೇಂದ್ರ ಅವರು ಶೃಂಗೇರಿಯ ಮುಂಡಗಾರು ಎಂಬ ಊರಿನಲ್ಲಿ ಸರಳವಾಗಿ ಶ್ವೇತಾ ಜೊತೆ ನಟ ಗಜೇಂದ್ರ ಅವರ ಮದುವೆ ನಡೆದಿದೆ. ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ಮತ್ತು ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಈ ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

ಕಾಮಿಡಿ ಕಿಲಾಡಿಗಳು ಶೋ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಕಂಠಿ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದರು.

ಅಣ್ಣ ತಂಗಿ, ಪಾರ್ವತಿ ಪರಮೇಶ್ವರ, ಪರಿಣಿತ, ಅನುಬಂಧ ಸೀರಿಯಲ್‌ಗಳಲ್ಲಿ ಗಜೇಂದ್ರ ನಟಿಸಿದ್ದಾರೆ. ರವಿಚಂದ್ರನ್ ನಟನೆಯ ಕ್ರೇಜಿಲೋಕ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ