ಸಾಹೋ ಚಿತ್ರದ ನಿರ್ದೇಶಕರಾದ ಸುಜಿತ್ ಹಾಗೂ ನಾಯಕ ಪ್ರಭಾಸ್ ನಡುವೆ ಮನಸ್ತಾಪ ಉಂಟಾಗಿದೆಯಾ. ಈ ಬಗ್ಗೆ ನಿರ್ದೇಶಕರು ಹೇಳಿದ್ದೇನು?
ಶುಕ್ರವಾರ, 16 ಮಾರ್ಚ್ 2018 (06:32 IST)
ಹೈದರಾಬಾದ್: ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯಿಸುತ್ತಿರುವ ‘ಸಾಹೋ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಆದರೆ ಈ ಮಧ್ಯ ಸಾಹೋ ಚಿತ್ರದ ನಿರ್ದೇಶಕರಾದ ಸುಜಿತ್ ಹಾಗೂ ನಾಯಕ ಪ್ರಭಾಸ್ ಅವರ ನಡುವೆ ಸಿನಿಮಾದ ಬಗ್ಗೆಗಿನ ಕೆಲವು ವಿಷಯಕ್ಕೆ ಜಗಳವಾಗಿ ಚಿತ್ರೀಕರಣ ನಿಲ್ಲಿಸಲಾಗಿದೆ ಎಂಬ ಗಾಸಿಪ್ ಕೇಳಿಬಂದಿದೆ.
ನಿರ್ದೇಶಕ ಸುಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಶ್ರದ್ದಾ ಕಪೂರ್ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಯ್ಯಾಕ್ಷನ್ ಸನ್ನಿವೇಶಗಳನ್ನು ದುಬೈನಲ್ಲಿ ಚಿತ್ರೀಕರಿಸುತ್ತಿದ್ದು, ಪ್ರಭಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಈ ಸಂದರ್ಭದಲ್ಲಿ ಚಿತ್ರಕ್ಕೆ ಕುರಿತು ಈ ರೀತಿಯಾದ ಗಾಸಿಪ್ ಕೇಳಿ ಆತಂಕಗೊಂಡಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಸುಜಿತ್ ಅವರು ‘ಇದೆಲ್ಲಾ ಸುಳ್ಳು ಸುದ್ದಿ. ಸಿನಿಮಾದ ಶೂಟಿಂಗ್ ಕಾರ್ಯ ಮುಕ್ತಾಯದ ಹಂತದಲ್ಲಿದ್ದು ಶೀಘ್ರದಲ್ಲೇ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ