’ಹದಿನಾಲ್ಕು ವರ್ಷಕ್ಕೆ ಲಿಪ್‍ಲಾಕ್, ಅದೇ ನಾನು ಮಾಡಿದ ತಪ್ಪ’

ಗುರುವಾರ, 23 ಫೆಬ್ರವರಿ 2017 (11:46 IST)
ಶ್ರೀಲಂಕಾದಲ್ಲಿ ಹುಟ್ಟಿ, ಆಸ್ಟ್ರೇಲಿಯಾದಲ್ಲಿ ಬೆಳೆದು, ಬಾಲಿವುಡ್‌ನಲ್ಲಿ ಬಣ್ಣದ ಹಚ್ಚಿದ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್. ಇತ್ತೀಚೆಗೆ ಅವರು ತಮ್ಮ ಜೀವನದಲ್ಲಿ ನಡೆದ  ಘಟನೆಗಳನ್ನು ಮೆಲುಕುಹಾಕಿದ್ದಾರೆ. ಶಾಲೆಯಲ್ಲಿದ್ದಾಗ ಮೊದಲ ಬಾರಿ 14 ವರ್ಷ ವಯಸ್ಸಿನಲ್ಲೇ ನಾನು ಲಿಪ್ ಲಾಕ್ ರುಚಿ ನೋಡಿದ್ದೇನೆಂದು ಹೇಳಿದ್ದಾರೆ.
 
ಮೂರು ವರ್ಷಗಳವರೆಗೂ ಆ ಹುಡುಗನ ಜತೆಗೇ ಸಂಬಂಧ ಇಟ್ಟುಕೊಂಡಿದ್ದೆ. ಕೇವಲ ಒಂದು ಚುಂಬನ ಅಷ್ಟೇ ಅಲ್ಲ. ಆತನೊಂದಿಗೆ ಎಲ್ಲಾ ಮಾಡಿ ಮುಗಿಸಿದ್ದೇನೆ. ಆದರೆ ಆ ಬಳಿಕ ಅವನೊಂದಿಗೆ ಬ್ರೇಕಪ್ ಆದೆ ಎಂದು ತಿಳಿಸಿದ್ದಾರೆ. ಆತನೊಂದಿಗೆ ಆ ರೀತಿ ಮಾಡಿರುವುದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ.
 
ಆ ವಯಸ್ಸಲ್ಲಿ ಆ ರೀತಿ ಮಾಡಬಾರದಿತ್ತು. ಅದೇ ತಾನು ಮಾಡಿದ ತಪ್ಪು. ಆ ರೀತಿ ಮಾಡಿದ್ದಕ್ಕೆ ಈಗ ನೋವನುಭವಿಸುತ್ತಿದ್ದೇನೆ ಎಂದಿದ್ದಾರೆ.  ಅದೇ ರೀತಿ ನಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಾಗಿ ಬಾಲಿವುಡ್ ನನಗೆ ಕೊಟ್ಟಿದೆ ಎಂದಿದ್ದಾರೆ. ಆದರೆ ಹಳೆಯ ನೆನಪುಗಳನ್ನು ಈಗ ಯಾಕೆ ಮೆಲುಕು ಹಾಕಿದರೋ ಗೊತ್ತಾಗುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ