ಜಗ್ಗಾ ಜಾಸೂಸ್ ಚಿತ್ರ ನಟಿ ಆತ್ಮಹತ್ಯೆ
ಗುರುಗಾಂವ್ ನಲ್ಲಿರುವ ತಮ್ಮ ಮನೆಯಲ್ಲಿ ಬಿದಿಶಾ ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಬಿದಿಶಾ ಫೋನ್ ಕರೆಗೆ ಸ್ಪಂದಿಸದಿದ್ದಾಗ ಗಾಬರಿಗೊಂಡ ತಂದೆ ಸ್ಥಳೀಯ ಪೊಲೀಸರಿಗೆ ನೆರವು ಕೇಳಿದ್ದರು. ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿತ್ತು. ಹಾಗೂ ಮನೆಯ ಒಳಗಿನ ಕೊಠಡಿಯಲ್ಲಿ ಬಿದಿಶಾ ಫ್ಯಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.