ಜೂನಿಯರ್ ಎನ್ಟಿಆರ್ ಅಭಿನಯದ ಜನತಾ ಗ್ಯಾರೇಜ್ ರಿಲೀಸ್ಗೆ ಡೇಟ್ಸ್ ಫಿಕ್ಸ್
ಗುರುವಾರ, 25 ಆಗಸ್ಟ್ 2016 (17:51 IST)
ಜೂನಿಯರ್ ಎನ್ಟಿಆರ್ ಅಭಿನಯದ 'ಜನತಾ ಗ್ಯಾರೇಜ್' ರಿಲೀಸ್ಗೆ ರೆಡಿಯಾಗಿದೆ. ತೆಲಗು ಚಿತ್ರರಸಿಕರು, ಅದರಲ್ಲೂ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಗಾಗ್ಲೇ ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿವೆ.
ಇನ್ನೂ ವಿಶೇಷವೆಂದ್ರೆ ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಜತೆಗೆ ಮಲೆಯಾಳಂ ನಟ ಮೋಹನ್ ಲಾಲ್ ಕೂಡ ನಟಿಸುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿಯ ಸಂಗತಿ.
'ಜನತಾ ಗ್ಯಾರೇಜ್' ಚಿತ್ರದವು ಸೆಪ್ಟೆಂಬರ್ 1ರಂದು ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಶೂಟಿಂಗ್ ಕೂಡ ಮುಕ್ತಾಯವಾಗಿದ್ದು, ಈ ಚಿತ್ರವು ಖಂಡಿತ ಅಭಿಮಾನಿಗಳಿಗೆ ಲೈಕ್ ಆಗಲಿದೆ. ಚಿತ್ರ ಬಿಡುಗಡೆಯ ದಿನದವರೆಗೂ ಅಭಿಮಾನಿಗಳು ಕಾಯಲೆಬೇಕು.
ಟಾಲಿವುಡ್ ನಟ ಎನ್ಟಿಆರ್ ಪುನೀತರಾಜಕುಮಾರ ಅವರ ಮುಂಬರುವ ಸಿನಿಮಾದಲ್ಲಿ ಹಾಡಿದ್ದಾರೆ. 'ಗೆಳೆಯ ಗೆಳೆಯ' ಹಾಡಿನ ಸಾಂಗ್ಗೆ ತಮ್ಮ ಕಂಠ ನೀಡಿದ್ದರು. ಈ ಸಾಂಗ್ನಲ್ಲಿ ಎನ್ಟಿಆರ್ ತುಂಬಾ ಉತ್ಸಾಹದಿಂದ ಹಾಡಿದ್ದು ಅಭಿಮಾನಿಗಳು ಗಮನ ಸೆಳೆದಿತ್ತು..ಸಿನಿಮಾದ ಗೆಳೆಯಾ ಗೆಳೆಯಾ ಹಾಡು ಎಲ್ಲರಿಗೂ ಇಷ್ಟವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ