10 ವರ್ಷಗಳ ಬಳಿಕ ಮತ್ತೆ ಕನ್ನಡಚಿತ್ರರಂಗಕ್ಕೆ ಜಿಂಕೆ ಮರಿ ರೇಖಾ ಎಂಟ್ರಿ

ಶನಿವಾರ, 10 ಸೆಪ್ಟಂಬರ್ 2016 (15:15 IST)
ಈ ಜಿಂಕೆ ಮರಿ ಎಲ್ಲಿ ಹೋಯ್ತಪ್ಪಾ ಅಂತ ಹುಡುಕಿ ಸುಸ್ತಾದವರಿಗೆ ಗುಡ್ ನ್ಯೂಸ್ ಬಂದಿದೆ. ಜಿಂಕೆ ಮರಿ ಖ್ಯಾತಿಯ ನಟಿ ರೇಖಾ ಮತ್ತೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 10 ವರ್ಷಗಳ ಬಳಿಕ ಮತ್ತೆ ಎಂಟ್ರಿ ನೀಡುವುದರ ಮೂಲಕ ಮತ್ತೆ ಅಭಿಮಾನಿಗಳಿಗೆ ಸರ್‌ಪ್ರೈಜ್ ನೀಡಲಿದ್ದಾರೆ. 
10 ವರ್ಷಗಳ ನಂತರ ಸ್ಯಾಂಡಲ್‌ವುಡ್‌ಗೆ ಮತ್ತೆ ಜಿಂಕೆ ಮರಿ ರೇಖಾಳ ಆಗಮನವಾಗಿದೆ! ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿರುವ ರೇಖಾ, ಜಾಹೀರಾತು, ಮತ್ತು ಸಿನಿಮಾ ಕ್ಷೇತ್ರದಲ್ಲಿ ಬಿಜಿಯಾಗಿದ್ದಾರಂತೆ. ಈಗ ಸ್ವಲ್ಪ ಬಿಡುವು ಮಾಡಿಕೊಂಡು ಕನ್ನಡದತ್ತ ತಿರುಗಿ ನೋಡುತ್ತಿದ್ದಾರೆ. 

'ಜಿಂಕೆ ಮರಿ ಬಂತು ನೋಡ್ಲಾ ಮಗಾ 'ಎಂಬ ಹಾಡಿನಿಂದಲೇ ಹೆಸರು ಮಾಡಿದ್ದ ರೇಖಾ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ರೇಖಾ ಇದೀಗ ಪ್ರೇಮ ಚಂದ್ರಮ, ಹಾಗೂ ಜಾಲಿಬಾಯ್ ಚಿತ್ರದಲ್ಲಿ ನಟಿಸಲಿದ್ದಾರೆ. ಜಾಲಿಬಾಯ್ ಚಿತ್ರದಲ್ಲಿ ದಿಗಂತ ಜತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.ಈ ಹಿಂದೆ ನಟ ಗಣೇಶ್ ಜತೆಗೆ ಹುಡುಗಾಟ, ಹಾಗೂ ಚೆಲ್ಲಾಟ ಚಿತ್ರಗಳಲ್ಲಿ ನಟಿಸಿ ರೇಖಾ ಎಲ್ಲರ ಗಮನ ಸೆಳೆದಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ