'ಡಿಶೂಂ' ಚಿತ್ರದಲ್ಲಿ ವರುಣ್ ಧವನ್ ಹಾಗೂ ಜಾನ್ ಅಬ್ರಾಹಂ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು.. ಇಬ್ಬರು ಡಿಶೂಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಇಬ್ಬರ ಕೆಮೆಸ್ಟ್ರಿ ನೋಡಿದ್ರೆ ಈ ಚಿತ್ರದಲ್ಲಿ ನಿಮಗೆ ಗೊತ್ತಾಗಲಿದೆ. ಸದ್ಯಕ್ಕಂತೂ ಜಾನ್ ಅಬ್ರಾಹಂ ವರುಣ್ ಧವನ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ವರುಣ್ ಧವನ್ ಜತೆಗೆ ನಟಿಸಿದ್ದು ಅದ್ಭುತವಾಗಿತ್ತು ಎಂದಿದ್ದಾರೆ.
ಆ್ಯಕ್ಷನ್ ಥ್ರೀಲ್ಲರ್ ಮೂವೀ ಎಂದು ಹೇಳಲಾಗುವ 'ಡಿಶೂಂ' ಚಿತ್ರದ ನಿರ್ದೇಶನ ರೋಹಿತ್ ಧವನ್ ಮಾಡುತ್ತಿದ್ದಾರೆ. ವರುಣ್ ಹಾಗೂ ರೋಹಿತ್ ಧವನ್ ಜತೆ ಸ್ಕ್ರೀನ್ ಶೇರ್ ಮಾಡಿದ್ದು ಖುಷಿ ತಂದಿದೆ ಎಂದ ಅವರು, ರೋಹಿತ್ ನನ್ನ ಚಿಕ್ಕ ಸಹೋದರನಿದ್ದಂತೆ, ನನ್ನ ಹಾಗೂ ವರುಣ್ ಧವನ್ ಕೆಮೆಸ್ಟ್ರಿ ಅದ್ಭುತವಾಗಿತ್ತು ಎಂದು ಜಾನ್ ತಿಳಿಸಿದರು.
ಇನ್ನೂ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಡಿಸ್ ನರ್ಗಿಸ್ ಫಕ್ರಿ, ಅಕ್ಷಯ್ ಖನ್ನಾ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಜಾಕ್ವೆಲಿನ್ ಜತೆ ಅಭಿನಯಿಸಿದ್ದೇನೆ, ಮತ್ತೆ ಈ ಚಿತ್ರದಲ್ಲಿ ಅವರ ಜತೆ ನಟಿಸುತ್ತಿದ್ದೇನೆ. ಅವಳು ಸ್ವೀಟ್ ಹಾರ್ಟ್ ಹುಡುಗಿ, ಇನ್ನೂ ನಾನು ಅಕ್ಷಯ್ ಅವರ ದೊಡ್ಡ ಅಭಿಮಾನಿ ನಾನು, ಅವರೊಬ್ಬ ಅದ್ಭುತ ಕಲಾವಿದ ಎಂದು ಜಾನ್ ಅಬ್ರಾಹಂ ಹೇಳಿದ್ದಾರೆ.
ಇನ್ನೂ ಈ ಚಿತ್ರದಲ್ಲಿ ಜಾನ್ ಅಬ್ರಾಹಂ ಹಾಗೂ ವರುಣ್ ಧವನ್, ಜಾಕ್ವೆಲಿನ್ ಫರ್ನಾಡಿಸ್ ಕಾಣಿಸಿಕೊಂಡಿದ್ದಾರೆ, ಇನ್ನೂ ಈ ಚಿತ್ರ ಜುಲೈ 29ಕ್ಕೆ ರಿಲೀಸ್ ಆಗಲಿದೆ.