ಮ್ಯೂಸಿಕ್ ಅಲ್ಬಂ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಮಿಂಚಿಂಗ್..

ಬುಧವಾರ, 27 ಜುಲೈ 2016 (08:42 IST)
ತಿಥಿ ಸಿನಿಮಾ ವಿಶ್ವದಾದ್ಯಂತ ಗಮನ ಸೆಳೆಯೋಕೆ ಪ್ರಮುಖ ಕಾರಣ ಸಿನಿಮಾದಲ್ಲಿನ ಪ್ರಮುಖ ಪಾತ್ರಧಾರಿಗಳಾದ ಗಡ್ಡಪ್ಪ ಹಾಗೂ ಸೆಂಚುರಿ ಗೌಡ. ಇದೀಗ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ಇಬ್ಬರೂ ಕೂಡ ಮತ್ತೊಮ್ಮೆ ಸೌಂಡ್ ಮಾಡೋದಕ್ಕೆ ಬರುತ್ತಿದ್ದಾರೆ.ಅದು ಮ್ಯೂಸಿಕ್ ಆಲ್ಬಂನ ಮೂಲಕ.

ಕನ್ನಡದಲ್ಲಿ ಕೆಎ-01 ಅಂತಾ ಹಿಪ್ ಹಾಪ್ ಮ್ಯೂಸಿಕ್ ವಿಡಿಯೋ ಆಲ್ಬಂ ತಯಾರಾಗುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ.ಅಲೋಕ್ ಬಾಬು ಅನ್ನೋರು ಈ ಮ್ಯೂಸಿಕ್ ಆಲ್ಬಂನ ಸೂತ್ರಧಾರ. ಇದೀಗ ಅಲೋಕ್ ತಮ್ಮ ಆಲ್ಬಂಗೆ ಹೊಸ ಲುಕ್ ನೀಡಿದ್ದಾರೆ.ಅದು ಹೇಗೆ ಗೊತ್ತಾ. ತಿಥಿ ಸಿನಿಮಾದಲ್ಲಿ ಅಭಿನಯಿಸಿರುವ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ಅಂದ್ರೆ ಚನ್ನೇಗೌಡ ಹಾಗೂ ಸಿಂಗ್ರಿ ಗೌಡ ಅವರು ಈ ಆಲ್ಬಂನಲ್ಲಿ ಅಭಿನಯಿಸಿದ್ದಾರಂತೆ.ಆಲ್ಬಂನಲ್ಲಿ ತುಂಬಾನೇ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಅಂದ್ಹಾಗೆ ತಿಥಿ ಸಿನಿಮಾದ ಮೂಲಕ ಒಮ್ಮಿಂದ್ಮೆಲೆ ಸ್ಟಾರ್ ಆದವರು ಚೆನ್ನೇಗೌಡ ಹಾಗೂ ಸಿಂಗ್ರಿ ಗೌಡ. ಅವರು ಇದೀಗ ಮತ್ತೆ ಮ್ಯೂಸಿಕ್ ಆಲ್ಬಂ ಮೂಲಕ ಇವರಿಬ್ಬರು ಸೌಂಡ್ ಮಾಡೋದಕ್ಕೆ ರೆಡಿಯಾಗಿದ್ದಾರೆ.ಹಾಗಾಗಿ ಅಭಿಮಾನಿಗಳು ಈ ಆಲ್ಬಂನ್ನು ಕಣ್ತುಂಬಿಕೊಳ್ಳೋದಕ್ಕೆ ಕಾತುರರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ