ದೇಶದಲ್ಲಿ 'ಕಬಾಲಿ' ಚಿತ್ರ ರಿಲೀಸ್ ಮುನ್ನವೇ ಎಲ್ಲಾ ಕಡೆಗಳಲ್ಲಿ ಸುದ್ದಿ ಮಾಡುತ್ತಿದೆ.ಈ ಚಿತ್ರ ಜುಲೈ 22ರಂದು ರವಿವಾರ ತೆರೆ ಮೇಲೆ ಬರಲಿದೆ. ಆದ್ರೆ ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ರಜನಿಕಾಂತ್ ಅಭಿಮಾನಿಗಳು, ಪ್ರೇಕ್ಷಕರು ಕಾಯುತ್ತಿದ್ದಾರೆ. ಇನ್ನೂ ಚಿತ್ರ ವೀಕ್ಷಿಸಲು ಬೆಂಗಳೂರಲ್ಲಿ ಪ್ರೇಕ್ಷಕರು ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಡುತ್ತಿರುವುದು ಕಂಡು ಬಂದಿದೆ.
'ಕಬಾಲಿ' ಚಿತ್ರದ ಟಿಕೆಟ್ ದರವನ್ನು 500ಕ್ಕೆ ಏರಿಸಲಾಗಿದೆ. ಜನರು ಚಿತ್ರವನ್ನು ಅಡ್ವಾನ್ಸ್ ಬುಕಿಂಗ್ ಮಾಡುವಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಬ್ರಿಗೇಡ್ ರೋಡ್‌ನಲ್ಲಿರುವ ಜನಪ್ರಿಯ ಚಿತ್ರಮಂದಿರ ರೆಕ್ಸ್ ಚಿತ್ರಮಂದಿರ, ಲಾಲ್ ಬಾಗ್‌ನಲ್ಲಿರುವ ಊರ್ವಶಿ ಡಿಜಿಟಲ್ 4ಕೆ ಸಿನಿಮಾ ಮಂದಿರಗಳಲ್ಲಿ ಚಿತ್ರ ವೀಕ್ಷಿಸಲು ವೆಬ್ ಸೈಟ್‌ಗಳಲ್ಲಿ ರಿಲೀಸ್‌ಗೂ ಮುನ್ನವೇ ಟಿಕೆಟ್ ಬುಕಿಂಗ್ ಮಾಡಲಾಗುತ್ತಿದೆ.
ಇನ್ನೂ ಶನಿವಾರ ಹಾಗೂ ರವಿವಾರದಂದು ಉಳಿದ ಟಿಕೆಟ್‌ನ್ನು ಪ್ರತಿ ಟೆಕೆಟ್‌ಗೆ 500 ನೀಡಿ ಕೊಂಡುಕೊಳ್ಳಬಹುದು. ಇನ್ನೂ ತಮಿಳು ಚಿತ್ರ ಕಬಾಲಿ ಸಿನಿಮಾವನ್ನು ತೆಲಗು,ಮಲೆಯಾಳಂ ಹಾಗೂ ಹಿಂದಿ ಡಬ್ ಮಾಡಲಾಗಿದೆ. ಕರ್ನಾಟಕದಲ್ಲಿ ನಾಲ್ಕು ಭಾಷೆಗಳಲ್ಲಿ ಚಿತ್ರ ಬಿತ್ತರಗೊಳ್ಳಲಿದೆ.