ನೇಪಥ್ಯಕ್ಕೆ ಸರಿದ ತ್ರಿಭುವನ್ ಹಾಗೂ ಕೈಲಾಶ್ ಥಿಯೇಟರ್

ಶುಕ್ರವಾರ, 29 ಏಪ್ರಿಲ್ 2016 (15:44 IST)
ಗಾಂಧೀನಗರದಲ್ಲಿರುವ ಚಿತ್ರಮಂದಿರಗಳು ಅಂದಾಕ್ಷಣ ನೆನಪಾಗುತ್ತಿದ್ದದ್ದು ತ್ರಿಭುವನ್ ಹಾಗೇ ಕೈಲಾಶ್ ಥಿಯೇಟರ್ ಗಳು. ಬೆಂಗಳೂರಿನ ಹೃದಯಭಾಗದಲ್ಲಿದ್ದ ಈ ಚಿತ್ರಮಂದಿರಗಳು ಇನ್ಮೇಲೆ ನಿಮಗೆ ಕೇವಲ ನೆನಪು ಮಾತ್ರ. ಈ ಎರಡು ಚಿತ್ರಮಂದಿರಗಳ ಮಾಲೀಕರು ಇವುಗಳಿಗೆ ಬೀಗ ಜಡಿದಿದ್ದಾರೆ.
ಗಾಂಧಿನಗರದ ಪ್ರಮುಖ ಮತ್ತು ದೊಡ್ಡ ಚಿತ್ರಮಂದಿರಗಳ ಸಾಲಿನಲ್ಲಿ ‘ತ್ರಿಭುವನ್’ ಗುರ್ತಿಸಿಕೊಂಡಿತ್ತು. ಆದ್ರೆ ಗುರುವಾರ ಈ ಎರಡು ಚಿತ್ರಮಂದಿರಗಳಲ್ಲಿ ಕೊನೆಯ ಪ್ರದರ್ಶನ ನಡೆಯಿತು. 
 
ಸುಮಾರು 40 ವರ್ಷಗಳ ಇತಿಹಾಸವಿರುವ ಈ ಥಿಯೇಟರ್ ಗಳು ತಮ್ಮ ಕೊನೆಯ ಪ್ರದರ್ಶನ ಮುಗಿಸಿ ಇತಿಹಾಸದ ಪುಟ ಸೇರಿವೆತ್ರಿಭುವನ್‌ನಲ್ಲಿ ಹಿಂದಿಯ ‘ಲಾಲ್ ರಂಗ್‌’ ಮತ್ತು ಕೈಲಾಶ್‌ನಲ್ಲಿ ‘ಲಾಸ್ಟ್‌ ಬಸ್‌’ ಚಿತ್ರಗಳ ಕೊನೆಯ ಪ್ರದರ್ಶನದೊಂದಿಗೆ ಗುರುವಾರ ಸಂಜೆ ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಿವೆ.
 
ಇನ್ನು ಈ ಚಿತ್ರಮಂದಿರಗಳು ಸ್ಥಗಿತಗೊಳ್ಳಲು ಕಾರಣ ಮಲ್ಟಿಫ್ಲೆಕ್ಸ್ ಗಳು.ಹಾಗಾಗಿ ತ್ರಿಭುವನ್ ಹಾಗೂ ಕೈಲಾಶ್ ಚಿತ್ರಮಂದಿರದ ಜಾಗದಲ್ಲಿ ಮಲ್ಟಿಪ್ಲೆಕ್ಸ್‌ ನಿರ್ಮಾಣವಾಗಲಿದ್ದು, ಈಗಾಗಲೇ ನಿರ್ಮಾಣಕ್ಕೆ ಗುತ್ತಿಗೆದಾರರು ಅನುಮತಿ ಪಡೆದಿದ್ದಾರೆ. ಅದರಂತೆ ಇದೇ ಜಾಗದಲ್ಲಿ ಮಲ್ಟಿಫ್ಲೆಕ್ಸ್ ಗಳು ತಲೆ ಎತ್ತಲಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ