ನಟಿ ಕಾಜಲ್ ಅಗರವಾಲ್ ತೆಲಗು ನಟ ಅಲ್ಲು ಅರ್ಜುನ್ ಜತೆಗೆ ಮುಂದಿನ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಅಲ್ಲು ಅರ್ಜುನ್ ಜತೆಗೆ ಕಾಜಲ್ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಲಿದ್ದು,ನಿರ್ದೇಶಕ ಹರೀಶ್ ಶಂಕರ್ ಇತ್ತೀಚೆಗೆ ಚಿತ್ರದಲ್ಲಿ ನಟ-ನಟಿಯರ ಬಗ್ಗೆ ಚರ್ಚೆ ಕೂಡ ಮಾಡಿದ್ದರು. ಈ ಚಿತ್ರಕ್ಕಾಗಿ ಕಾಜಲ್ ಅವರನ್ನು ಇತ್ತೀಚೆಗೆ ಚಿರಂಜೀವಿ ಸೆಟ್‌ನಲ್ಲಿ ಭೇಟಿ ಮಾಡಲಾಗಿತ್ತು.
ಈ ವೇಳೆ ತಮ್ಮ ಮುಂದಿನ ಚಿತ್ರಕ್ಕಾಗಿ ಕಾಜಲ್ ಜತೆಗೆ ನಿರ್ದೇಶಕ ಹರೀಶ್ ಶಂಕರ್ ಸುದೀರ್ಘ ಚರ್ಚೆ ಮಾಡಿದ್ದಾರಂತೆ. ಕಾಜಲ್‌ಗೆ ಕಥೆ ಇಷ್ಟವಾಗಿದ್ದು, ಡೇಟ್ಸ್ ಗಾಗಿ ಅಡ್ಜಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕಾಜಲ್‌ಗೆ ಕಥೆ ಇಷ್ಟವಾಗಿದ್ದು, ಡೇಟ್ಸ್ ಗಾಗಿ ಅಡ್ಜಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.