ಕಾಜೋಲ್ ಹೊಸ ಚಿತ್ರಕ್ಕೆಂದು ಪಡೆದ ಸಂಭಾವನೆ ಅಕ್ಷರಗಳಲ್ಲಿ ಬರೋಬ್ಬರಿ ಐದು ಕೋಟಿ

ಶುಕ್ರವಾರ, 17 ಏಪ್ರಿಲ್ 2015 (10:39 IST)
ಬಹಳ ವರ್ಷಗಳ ಬಳಿಕ ಮತ್ತೆ ಬೆಳ್ಳಿ ತೆರೆಯಲ್ಲಿ ಕಾಜೋಲ್ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾಳೆ ಎನ್ನುವ ಸಂಗತಿಯನ್ನು ನಾವು ಈ ಮೊದಲು ತಿಳಿಸಿದ್ದೆವು.  ದಿಲ್ವಾಲೇ ದುಲ್ಹನಿಯಾ ಲೇಜಾಯೆಂಗೆ ಚಿತ್ರದ ಮೂಲಕ ಜನಪ್ರಿಯ ತಾರಾಜೋಡಿ ಎನ್ನುವ ಅಗ್ಗಳಿಕೆ ಪಡೆದ ಶಾರೂಖ್  ಹಾಗೂ ಕಾಜೋಲ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಒಂದು ಸುದ್ದಿ ಹೊರ ಬಂದಿದೆ. ಆ ಸಂಗತಿ ಎಂದರೆ ಕಾಜೋಲ್ ಪಡೆಯುವ ಸಂಭಾವನೆ. ಅದು  ಲಕ್ಷಗಳಲ್ಲ ಬರೋಬ್ಬರಿ ಐದು ಕೋಟಿಗಳು.ಈ ಸಂಗತಿಯನ್ನು ಒಂದು ಪೀತ ಪತ್ರಿಕೆ ಹೊರ ಹಾಕಿದೆ. 

ಬಹಳ ಕಾಲದಿಂದ ನಟಗೆ ಆದ್ಯತೆ ನೀಡದೆ ಇದ್ದರೂ ಸಹಿತ ಈಗ ಇರುವ ಪ್ರಮುಖ ನಾಯಕಿಯರಾದ ಕರೀನಾ ಕಪೂರ್, ಕತ್ರಿನಾರಂತೆ ಅತ್ಯಧಿಕ ಸಂಭಾವನೆ ಪಡೆಯುತ್ತಿರುವುದು ಈಗ ಬಿಟೌನ್ ನಲ್ಲಿ ಹೆಚ್ಚು ಚರ್ಚೆಗೆ ಬಂದಿರುವ ಸುದ್ದಿಯಾಗಿದೆ. ಜೂನ್ ತಿಂಗಳಿನಿಂದ ಆಕೆ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾಳೆ. ಬಾಜಿಗರ್, ಕುಚ್ ಕುಚ್ ಹೋತಾ ಹೈ, ಮೈ ನೇ ಈಸ್ ಖಾನ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹಿಟ್ ಜೋಡಿ ಎನ್ನುವ ಹೆಗ್ಗಳಿಕೆ ಪಡೆದ ಶಾರೂಖ್ ಹಾಗೂ ಕಾಜೋಲ್ ಈಗ ಮತ್ತೊಮ್ಮೆ ಒಂದಾಗುತ್ತಿದ್ದಾರೆ ತೆರೆ ಮೇಲೆ. ಅದೇ ಚಾರ್ಮ್ ಉಳಿಸಿಕೊಳ್ಳುತ್ತಾರಾ ಎನ್ನುವುದೇ ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. 
 
ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಪತ್ನಿ ಗೌರಿ ಸಹಿತ  ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಕಾಜೋಲ್, ಶಾರೂಖ್ ಜೊತೆಗೆ ವರುಣ್ ಧವನ್, ಕೃತಿ ಸನನ್ ಮುಂತಾದವರು ನಟಿಸಿದ್ದಾರೆ. ಕ್ರಿಸ್ಮಸ್ ಸಮಯದಲ್ಲಿ ಈ ಚಿತ್ರ ಜನರ ಮುಂದೆ ತರುವ ಉದ್ದೇಶ ಹೊಂದಿದ್ದಾರೆ ರೋಹಿತ್. 

ವೆಬ್ದುನಿಯಾವನ್ನು ಓದಿ