ಕಲಿ ಸಿನಿಮಾದ ಬಗ್ಗೆ ಹಬ್ಬಿರುವ ಸುದ್ದಿಯೇನು?

ಗುರುವಾರ, 26 ಮೇ 2016 (10:36 IST)
ಶಿವರಾಜ್ ಕುಮಾರ್ ಹಾಗೂ ಸುದೀಪ್ ಮೊದಲ ಬಾರಿಗೆ ಜೊತೆಯಾಗುತ್ತಿರುವ ಸಿನಿಮಾ ಕಲಿ. ನಿರ್ದೇಶಕ ಪ್ರೇಮ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಕೆಲ ತಿಂಗಳ ಹಿಂದೆ ಅದ್ಧೂರಿಯಾಗಿ ಟೈಟಲ್ ಲಾಂಚ್ ಮಾಡಿ ಸುದ್ದಿಯಾಹಗಿತ್ತು. ಆದ್ರೀಗ ಸಿನಿಮಾದ ಬಗ್ಗೆ ಹೊಸ ಸುದ್ದಿಯೊಂದು ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿದೆ.
ಅಂದ್ಹಾಗೆ ಈ ಸುದ್ದಿಯೇನಪ್ಪಾ ಅಂದ್ರೆ ಕಲಿ ಸಿನಿಮಾ ಪ್ರಾಜೆಕ್ಟ್ ನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಅನ್ನೋ ಸುದ್ದಿ ಗಾಂಧೀನಗರದಲ್ಲಿ ಹರಿದಾಡುತ್ತಿದೆ. ಆದ್ರೆ ನಿರ್ದೇಶಕ ಪ್ರೇಮ್ ಮಾತ್ರ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.  ಕಲಿ ಸಿನಿಮಾದ ಬಗ್ಗೆ ಹಬ್ಬಿರುವ ಈ ಸುದ್ದಿ ಸುಳ್ಳು ಅಂತಾ ಅವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಾವು ಸಿನಿಮಾವನ್ನು ನಿಲ್ಲಿಸೋದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಕಲಿ ಸಿನಿಮಾದ ಕುರಿತಾದ ಇನ್ನೂ ಅನೇಕ ಅಪಡೇಟ್ಸ್ ಗಳನ್ನು ನಾವು ನಿಮಗೆ ಕೊಡುತ್ತೇವೆ ಅಂತಾ ಅವರು ಹೇಳಿದ್ದಾರೆ.
 
 ಸದ್ಯ ಪ್ರೇಮ್ ಏನೋ ಸಿನಿಮಾ ನಿಲ್ಲಲ್ಲ ಅನ್ನೋ ಮಾಹಿತಿಯನ್ನು ನೀಡಿದ್ದಾರೆ.ಆದ್ರೆ ಮೂಲಗಳ ಪ್ರಕಾರ ಸಿನಿಮಾದ ನಿರ್ಮಾಪಕರೇ ಸಿನಿಮಾವನ್ನು ಕೈಬಿಟ್ಟಿದ್ದೇವೆ ಅಂತಾ ಹೇಳುತ್ತಿದ್ದಾರೆ ಅಂತಾ ಗಾಂಧೀನಗರದ ಮಂದಿ ಗುಸುಗುಸು ಅಂತಿದ್ದಾರೆ.ಆದ್ರೆ ಇದು ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದಕ್ಕೆ ಕಾಲವೇ ಉತ್ತರ ನೀಡಬೇಕಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ