28 ವರ್ಷದ ಕಂಗನಾ 35 ವರ್ಷ ಆಗುವ ತನಕ ಮದುವೆ ಆಗಲ್ವಂತೆ

ಶನಿವಾರ, 18 ಏಪ್ರಿಲ್ 2015 (10:39 IST)
ಮದುವೆ ಬಗ್ಗೆ ನನಗೆ ಒಂದು ದೃಢವಾದ ಅಭಿಪ್ರಾಯ ಇಲ್ಲ. ವೈವಾಹಿಕ ಬಂಧ ಉತ್ತಮವಾದುದು ಎಂದು ಕೆಲವು ದಿನಗಳು ಅನ್ನಿಸುತ್ತದೆ, ಆದರೆ ಸ್ವಲ್ಪ ದಿನಕ್ಕೆ ನನ್ನ ಅಭಿಪ್ರಾಯ ಬದಲಾಗುತ್ತದೆ ಎಂದಿದ್ದಾಳೆ ಬಾಲಿವುಡ್ ಭಾಮೆ ಕಂಗನಾ. 

ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರದಲ್ಲಿ ಮಾಧವನ್ ಅವರ ಜೊತೆ ನಟಿಸಿರುವ ಕಂಗನಾಳ ಈ ಚಿತ್ರ ಮುಂದಿನ ತಿಂಗಳು 22  ರಂದು ಬಿಡುಗಡೆ ಆಗಲಿದೆ. ವೈವಾಹಿಕ ಬಾಂಧವ್ಯದ  ಹಿನ್ನೆಲೆಯಲ್ಲಿ ಮುನ್ನಡೆಯುವ ಈ ಚಿತ್ರದಲ್ಲಿ ನಟಿಸಿದ ಬಳಿಕವೂ ನಿಮಗೆ ಮದುವೆ ಬಗ್ಗೆ ಸ್ಥಿರವಾದ ನಿರ್ಧಾರ ಇಲ್ಲವೇ ಎನ್ನುವ  ಪ್ರಶ್ನೆಗೆ ಉತ್ತರಿಸುತ್ತಾ, ಇಲ್ಲ, ನಾನು ನಟಿಸುವ ಯಾವುದೇ ಚಿತ್ರದ  ಕಥೆಯನ್ನು ಮನಕ್ಕೆ ತಂದುಕೊಳ್ಳುವುದಿಲ್ಲ. 
 
ಒಂದುವೇಳೆ ನಿಜಕ್ಕೂ ಆಲೋಚನೆ ಮಾಡುವಂತಹ ವಿಷಯವಾಗಿದ್ದರೆ ಮಾತ್ರ ಅದರ ಬಗ್ಗೆ ಯೋಚಿಸುತ್ತೇನೆ ಎಂದು ಆಕೆ ಹೇಳಿದ್ದಾಳೆ. ತನು ವೆಡ್ಸ್ ಮನು ಚಿತ್ರದಲ್ಲಿ ವೈವಾಹಿಕ ಬಾಂಧ್ಯವದ ಕಥಾ ಹಂದರ ಹೊಂದಿದ್ದರು ಅದು ಪ್ರೇಮ ಕಥೆಯಂತೆ ಮುನ್ನಡೆಯುತ್ತದೆ.
 
ತಮ್ಮ ಬಂಧ ಉನ್ನತವಾದುದೇ ಎಂದು ಪರೀಕ್ಷಿಸಿಕೊಳ್ಳುವಂತೆ ಮಾಡುವ, ಒಟ್ಟಾರೆ ಅಂತಿಮವಾಗಿ ಮೆಡ್ ಫಾರ್ ಈಚ್ ಅದರ್ ಎಂದು ತಿಳಿಸುವ ಕಥೆಯನ್ನು ಹೊಂದಿದೆ ಎಂದಿರುವ ಕಂಗನಾ ತನಗೆ ಈಗ ಕೇವಲ 28 ವರ್ಷಗಳು 30 ವರ್ಷಗಳ ಬಳಿಕವಷ್ಟೇ ತಾನು ಮದುವೆಗೆ ಆದ್ಯತೆ ನೀಡುವುದು ಎಂದು ಹೇಳಿದ್ದಾಳೆ.ಅಂದರೆ 35ವರ್ಷಗಳ ಬಳಿಕ ಸ್ಪಷ್ಟ ನಿರ್ಧಾರಕ್ಕೆ ಬರುತ್ತಾಳಂತೆ! 

ವೆಬ್ದುನಿಯಾವನ್ನು ಓದಿ