ತ್ರಿವಳಿ ಪ್ರೇಮಕಥಾಹಂದರದ, ಕಂಗನಾ ರನಾವತ್, ಶಾಹಿದ್ ಕಪೂರ್ ಮತ್ತು ಸೈಫ್ ಆಲಿ ಖಾನ್ ಅಭಿನಯದ ರಂಗೂನ್ ಚಿತ್ರ ಮಹಾಶಿವರಾತ್ರಿ ದಿನ ತೆರೆಕಂಡಿದೆ. ಬರ್ಮಾದಲ್ಲಿ ನಡೆದ ಎರಡನೇ ಮಹಾಯುದ್ಧದ ಕಥೆಯನ್ನು ಚಿತ್ರ ಒಳಗೊಂಡಿದೆ.
ಕಂಗನಾ ರನೌತ್ ಅವರು 1940ರ ದಶಕದ ಮಿಸ್ ಜೂಲಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಕೆಲವು ಹಾಟ್ ಮತ್ತು ಬೋಲ್ಡ್ ದೃಶ್ಯಗಳಿಂದ ಚಿತ್ರ ಒಂದಷ್ಟು ಕುತೂಹಲ ಮೂಡಿಸಿರುವುದು ಗೊತ್ತೇ ಇದೆ.
ಮಿಸ್ ಜೂಲಿಯಾಗಾಗಿ ಇಬ್ಬರ ನಾಯಕರ ನಡುವೆ ಕಾದಾಟ ನಡೆಯುತ್ತದೆ. ಕೊನೆಗೆ ಜೂಲಿಯಾ ಯಾರ ತೆಕ್ಕೆಗೆ ವಾಲುತ್ತಾರೆ ಎಂಬುದನ್ನು ತೆರೆಯ ಮೇಲೆ ನೋಡಿ ಆನಂದಿಸಬೇಕು. ವಿಶಾಲ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿರುವ ಚಿತ್ರವನ್ನು ಅರುಣಾಚಲ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.