ಇಂದು 'ಗೋಲಿಸೋಡಾ' ಚಿತ್ರ ರಿಲೀಸ್

ಶನಿವಾರ, 10 ಸೆಪ್ಟಂಬರ್ 2016 (11:20 IST)
ಇವತ್ತು ಸ್ಯಾಂಡಲ್‌ವುಡ್‌ನ 'ಗೋಲಿಸೋಡಾ' ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ನಿನ್ನೆ ಶುಕ್ರವಾರಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ ನಿನ್ನೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಚಿತ್ರ ಇಂದು ರಿಲೀಸ್ ಕಾಣಲಿದೆ. 

 
ತಮಿಳು ಚಿತ್ರದ ರಿಮೇಕ್ ಆಗಿರುವ 'ಗೋಲಿಸೋಡಾ 'ಚಿತ್ರದಲ್ಲಿ ಪ್ರಿಯಂಕಾ ಜೈನ್, ನಟಿ ತಾರಾ, ದಿವ್ಯಾ, ಹೇಮಂತ, ಮಧುಸೂಧನ, ವಿಕ್ರಮ್,ಚಂದನ್ ಮೊದಲಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 
ಇದೇ ಶುಕ್ರವಾರ ಗೋಲಿಸೋಡ ಚಿತ್ರ ತೆರೆ ಕಾಣಬೇಕಿತ್ತು. ಆದ್ರೆ ಕಾವೇರಿ ಹೋರಾಟಕ್ಕಾಗಿ ಗೋಲಿಸೋಡಾ ತಂಡ ಬೆಂಬಲ ವ್ಯಕ್ತಪಡಿಸಿತ್ತು. ಶುಕ್ರವಾರ ಬಂದ್ ಇರುವುದರಿಂದ ಬಂದ್ ಮುಗಿದ ಬಳಿಕ ಸಂಜೆ 6 ಗಂಟೆಗೆ ಗೋಲಿಸೋಡಾ ಚಿತ್ರವನ್ನು ರಿಲೀಸ್ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದ್ರೆ ಇಂದು ಚಿತ್ರ ಬಿಡುಗಡೆಯಾಗುತ್ತಿದೆ. 
 
ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಸ್ಪೆಷಲ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. 'ಗೋಲಿಸೋಡಾ'ದ 'ರಂಗು ರಂಗು ರಂಗೀಲಾ' ಹಾಡಿಗೆ ತುಪ್ಪದ ಹುಡುಗಿ ರಾಗಿಣಿ ದ್ವಿದೇವಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿನಲ್ಲಿ ರಾಗಿಣಿ ದ್ವಿವೇದಿ ಕುಣಿದು ಚಿತ್ರ ರಿಸಿಕರನ್ನು ರಂಜಿಸಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ